

ವಿಜಯಪುರ:ಪ್ರತಿಭೆ ಎನ್ನುವುದು ಜನ್ಮದಿಂದ ಬಂದ ಗುಣ. ಪಾಂಡಿತ್ಯ ಎನ್ನುವುದು ಸತತ ಅಧ್ಯಯನ, ಕಠಿಣ ಪರಿಶ್ರಮದಿಂದ ಪ್ರಾಪ್ತಿಯಾಗುತ್ತದೆ ಎಂದು ವಿ.ಪ. ಮಾಜಿ ಸದಸ್ಯ, ಬಿಎಲ್ಡಿಇ ಸಂಸ್ಥೆ ಉಪಾಧ್ಯ ಜಿ.ಕೆ. ಪಾಟೀಲ ಹೇಳಿದರು.
ನಗರದ ಜಿ.ಕೆ. ಪಾಟೀಲ ಸಭಾಂಗಣದಲ್ಲಿ ಲಿಂಗರಾಜ ವಿವಿಧೋದ್ದೇಶ ಸಂಸ್ಥೆ, ಶಿರಸಂಗಿ ಲಿಂಗರಾಜ ಪತ್ತಿನ ಸಹಕಾರಿ ಸಂ ಹಾಗೂ ಜಿಲ್ಲಾ ಲಿಂಗಾಯತ ಕುಡುವಕ್ಕಲಿಗ ನೌಕರರ ೇಮಾಭಿವೃದ್ಧಿ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಕಮಲಾದೇವಿ ಬಸನಗೌಡ ಪಾಟೀಲ ಚಾರಿಟೆಬಲ್ ಟ್ರಸ್ಟ್ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿ ಮಗುವಿನಲ್ಲಿ ಪ್ರತಿಭೆ ಅಡಗಿರುತ್ತದೆ. ಪ್ರತಿಭೆಯನ್ನು ಪೋಷಿಸಿ ಬೆಳೆಸುವುದು ಶಿಕರ ಹಾಗೂ ಪಾಲಕರ ಆದ್ಯ ಜವಾಬ್ದಾರಿ. ಪ್ರತಿಭೆ ಎನ್ನುವುದು ಜನ್ಮದಿಂದಲೇ ಬಂದಿರುತ್ತದೆ. ಅದು ಪಾಂಡಿತ್ಯವಾಗಿ ಬೆಳಗಲು ಸತತ ಅಧ್ಯಯನ, ಕಠಿಣ ಪರಿಶ್ರಮ ಎಂಬ ಸಾಧನಗಳು ಅಗತ್ಯ ಎಂದರು.ಸಮಾಜ ಸೇವೆ ದೃಷ್ಟಿಯಿಂದ ನೂತನ ಟ್ರಸ್ಟ್ ಆರಂಭಗೊಂಡಿರುವುದು ಸಂತೋಷದ ಸಂಗತಿಯಾಗಿದೆ.
ಈ ಟ್ರಸ್ಟ್ ಅಡಿಯಲ್ಲಿ ಮಹಿಳಾ ಶಿಣಕ್ಕೆ ಪ್ರಥಮಾದ್ಯತೆ ದೊರಕಲಿ ಎಂದರು. ಕುಡುವಕ್ಕಲಿಗ ಸಮಾಜ ಸೇರಿದಂತೆ ಎಲ್ಲ ಸಮಾಜಗಳು ಶಿಣವಂತರಾಗಬೇಕು ಎಂದು ಕನಸು ಕಂಡಿದ್ದ ಶಿರಸಂಗಿ ಲಿಂಗರಾಜ ಮಹಾರಾಜರ ಆದರ್ಶದಲ್ಲಿ ನಾವು ಸಾಗಬೇಕಿದ್ದು, ಕುಡುವಕ್ಕಲಿಗ ಸಮಾಜ ಜಾಗೃತಿಯಾಗುತ್ತಿರುವುದು ಸಂತೋಷ ತಂದಿದೆ ಎಂದರು.
ವಿಪ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಸೇವೆ ಜೀವನದ ಧ್ಯೇಯವಾಗಬೇಕು. ಈ ನಿಟ್ಟಿನಲ್ಲಿ ಸಮಾಜ ಸೇವೆಯ ಸಂಕಲ್ಪದೊಂದಿಗೆ ಆರಂಭವಾಗಿರುವ ನೂತನ ಟ್ರಸ್ಟ್ ನೇತೃತ್ವದಲ್ಲಿ ಹಲವು ಸಾಮಾಜಿಕ ಕಾರ್ಯಚಟುವಟಿಕೆ ಆಯೋಜಿಸಲಿ. ಪ್ರಮುಖವಾಗಿ ಯುವಕರಿಗೆ ಉದ್ಯೋಗ ಗಿಟ್ಟಿಸಿಕೊಳ್ಳಲು ಅನುಕೂಲವಾಗಲು ಕೌಶಲಾಧಾರಿತ ತರಬೇತಿ, ವೃತ್ತಿ ಜೀವನ ರೂಪಿಸುವ ತರಬೇತಿ, ಸರಳ ಸಾಮೂಹಿಕ ವಿವಾಹ, ಪ್ರತಿಭಾ ಪುರಸ್ಕಾರ ಸೇರಿ ಹೀಗೆ ಹಲವು ರೀತಿಯಲ್ಲಿ ಸಾಮಾಜಿಕ ಕಾರ್ಯ ಕೈಗೊಳ್ಳಲಿ ಎಂದರು
.
ಕವಲಗಿ&ಇಂಡಿಯ ಸಿದ್ಧರಾಮೇಶ್ವರ ಸಂಸ್ಥಾನಮಠದ ಡಾ. ಅಭಿನವ ಸಿದ್ಧರಾಮೇಶ್ವರ ಸ್ವಾಮೀಜಿ ಹಾಗೂ ಡಾ. ಅಭಿನವ ಚೆನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಲಿಂಗಾಯತ ಕುಡುವಕ್ಕಲಿಗ ಮಹಾಸಭಾ ಅಧ್ಯ ಬಾಪುಗೌಡ ಪಾಟೀಲ ಶೇಗುಣಸಿ, ಹಿರಿಯರಾದ ಅಣ್ಣಾಸಾಹೇಬಗೌಡ ಪಾಟೀಲ ಉಕ್ಕಲಿ, ಕಮಲಾದೇವಿ ಬಸನಗೌಡ ಪಾಟೀಲ ಚಾರಿಟೇಬಲ್ ಟ್ರಸ್ಟ್ ಅಧ್ಯ ಸುರೇಶಗೌಡ ಬಿರಾದಾರ, ಜಿ.ಪಂ. ಮಾಜಿ ಸದಸ್ಯೆ ಪ್ರತಿಭಾಗೌಡತಿ ಪಾಟೀಲ, ಡಾ. ರಾಜಶೇಖರ ಹೊನ್ನುಟಗಿ, ಆರ್.ಎಸ್. ಜನಗೊಂಡ, ಬಿ.ಬಿ. ಪಾಲಾಯಿ, ಎಸ್.ಎ. ಬಿರಾದಾರ (ಕನ್ನಾಳ) ಮತ್ತಿತರರಿದ್ದರು.
ವಿಜಯಪುರದ ಜಿ.ಕೆ. ಪಾಟೀಲ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಕಮಲಾಬಾಯಿ ಬಸನಗೌಡ ಪಾಟೀಲ ಚಾರಿಟೆಬಲ್ ಟ್ರಸ್ಟ್ ಲೋಕಾರ್ಪಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಜಿ.ಕೆ. ಪಾಟೀಲ, ಸುನೀಲಗೌಡ ಪಾಟೀಲ, ಡಾ. ಅಭಿನವ ಸಿದ್ಧರಾಮೇಶ್ವರ ಸ್ವಾಮೀಜಿ ಮತ್ತಿತರರಿದ್ದಾರೆ.