ಯುವಜನತೆಗಿರಲಿ ಗ್ರಾಮೀಣ ಕ್ರೀಡೆಗಳ ಪರಿಚಯ...

Kamala 1
Published on

ಶಾಸಕ ಯಶ್​ಪಾಲ್​ ಸುವರ್ಣ ಆಶಯ

ಕಮಲ ಕಲರವ ಕ್ರೀಡಾಕೂಟ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ನಗರ ಭಾಗದ ಯುವ ಜನತೆಗೆ ಗ್ರಾಮೀಣ ಕ್ರೀಡೆಗಳನ್ನು ಪರಿಚಯಿಸುವ ಅಗತ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ. ಅಲ್ಲದೆ, ಕೃಷಿ ಕ್ಷೇತ್ರದ ಹಿರಿಯ ಸಾಧಕರನ್ನು ಗೌರವಿಸುವ ಮೂಲಕ ಅವರ ಶ್ರಮ ಹಾಗೂ ಕೃಷಿಯ ಮಹತ್ವವನ್ನೂ ಯುವ ಸಮುದಾಯಕ್ಕೆ ತಿಳಿಯಪಡಿಸಬೇಕಿದೆ. ಅದೇ ಆಶಯದೊಂದಿಗೆ ಕಾರ್ಯಕ್ರಮ ಆಯೋಜಿಸಿರುವ ಉಡುಪಿ ನಗರ ಬಿಜೆಪಿ ತಂಡದ ಕಾರ್ಯ ಅರ್ಥಪೂರ್ಣವಾಗಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ಸಂತಸ ವ್ಯಕ್ತಪಡಿಸಿದರು.

ಉಡುಪಿ ನಗರ ಬಿಜೆಪಿ ಘಟಕದ ವತಿಯಿಂದ ತಾಂಗದಗಡಿ ಶ್ಯಾಮ ಕಮಲ ಗದ್ದೆಯಲ್ಲಿ ಆಗಸ್ಟ್ 10ರಂದು ಆಯೋಜಿಸಿದ್ದ ಕಮಲ ಕಲರವ ಕೆಸರ್ಡ್​ ಒಂಜಿ ದಿನ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಹಿರಿಯ ಕೃಷಿಕರಿಗೆ ಸನ್ಮಾನ

ಪ್ರಗತಿಪರ ಕೃಷಿಕರಾದ ಚಂದ್ರಶೇಖರ ನಾಯ್ಕ, ವಿಠ್ಠಲ ನಾಯಕ್​, ಗದ್ದೆಯ ಮಾಲೀಕ ಪ್ರಕಾಶ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ ಶೆಟ್ಟಿ, ಬಿಜೆಪಿ ಹಿರಿಯ ಕಾರ್ಯಕರ್ತರಾದ ಹಾಡಿಮನೆ ಗೋಪಾಲ ಶೆಟ್ಟಿ, ಕೆ.ಟಿ. ಪೂಜಾರಿ, ಕೇಶವ ಸಾಲ್ಯಾನ್​, ಮೋಹನ ಉಪಾಧ್ಯಾಯ, ರಘುರಾಮ ಶೆಟ್ಟಿ, ಮಾಧವ ಅಂಚನ್​, ದೇವು ಪೂಜಾರಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕಮಲ ಕಲರವದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಸಾರ್ವಜನಿಕರಿಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ ಅಮೀನ್​, ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್​ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪಕ್ಷದ ಹಿರಿಯ ಮುಖಂಡರು, ನಗರಸಭಾ ಸದಸ್ಯರು, ವಿವಿಧ ಮೋರ್ಚಾಗಳ ಜಿಲ್ಲಾ ಹಾಗೂ ಮಂಡಲದ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಹುಲಿ ಕುಣಿತಕ್ಕೆ ಹೆಜ್ಜೆ ಹಾಕಿದ ಯಶ್​ಪಾಲ್​

Kamala 2
ಉಡುಪಿ ನಗರ ಬಿಜೆಪಿ ಟಕ ಅಧ್ಯಕ್ಷ ದಿನೇಶ ಅಮೀನ್​ ನೇತೃತ್ವದಲ್ಲಿ ಕೆಸರ್​ ಡೊಂಜಿ ದಿನದ ನಿಮಿತ್ತ ಆಯೋಜಿಸಿದ್ದ ಕಮಲ ಕಲರವ ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಹುಲಿ ಕುಣಿತದ ಮೂಲಕ ಗಮನ ಸೆಳೆದರು. ಕೆಸರಿನ ಗದ್ದೆಯಲ್ಲಿ ಸ್ಪರ್ಧಾಳುಗಳು ಸಂಗೀತಕ್ಕೆ ತಕ್ಕಂತೆ ಹುಲಿಹೆಜ್ಜೆ ಹಾಕುತ್ತಿದ್ದಂತೆ ಯಶ್​ಪಾಲ್​ ಸಹ ಕೆಲ ಸಮಯ ಅವರೊಂದಿಗೆ ಕೆಸರಿನಲ್ಲಿಯೇ ಹುಲಿ ಕುಣಿತ ಮಾಡಿದರು. ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಸಾಥ್​ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net