

ಶೃಂಗೇರಿ: ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದೆ.
11 ವಾರ್ಡ್‌ಗಳನ್ನು ಒಳಗೊಂಡ ಪಪಂನಲ್ಲಿ ಬಿಜೆಪಿ ಏಳು ಹಾಗೂ ಕಾಂಗ್ರೆಸ್ ನಾಲ್ವರು ಸದಸ್ಯರಿದ್ದಾರೆ.
ಕಳೆದ ಬಾರಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದಿತ್ತು. ಕಳೆದ ಅವಧಿಯಲ್ಲೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಏಳನೇ ವಾರ್ಡ್‌ನ ಬಿಜೆಪಿ ಸದಸ್ಯ ಹರೀಶ್ ವಿ. ಶೆಟ್ಟಿ ಅಧ್ಯಕ್ಷರಾಗಿ ಹಾಗೂ ಎಂಟನೇ ವಾರ್ಡ್‌ನ ಎಂ.ಎಲ್.ಪ್ರಕಾಶ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. 2020ರ ಅ.29ರಂದು ಅಧಿಕಾರ ವಹಿಸಿಕೊಂಡಿದ್ದರು. ಅವರಿಬ್ಬರ ಅವಧಿ 2023ರ ಏಪ್ರಿಲ್‌ಗೆ ಕೊನೆಗೊಂಡಿತ್ತು. ಬಳಿಕ ಆಡಳಿತಾಧಿಕಾರಿಯಾಗಿ ತಹಸೀಲ್ದಾರ್ ಗೌರಮ್ಮ ನೇಮಕಗೊಂಡರು. ಪ್ರಸ್ತುತ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಬಂದ ಕಾರಣ ಅಧ್ಯಕ್ಷರ ಆಯ್ಕೆ ಕುತೂಹಲ ಹೆಚ್ಚಿಸಿದೆ.