

ರಾಮದುರ್ಗ: ಕನ್ನಡ ಭಾಷೆಗೆ ಅವಮಾನ ಮಾಡಿದ ಚಿತ್ರನಟ ಕಮಲಹಾಸನ್ ಹೇಳಿಕೆ ಖಂಡಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರವಿಣ ಶೆಟ್ಟಿ ಬಣದ ಕರವೇ ಕಾರ್ಯಕರ್ತರು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಈಚೆಗೆ ಮನವಿ ಸಲ್ಲಿಸಿದರು. ತಾಲೂಕಾಧ್ಯ ಶ್ರೇಯಸ್ ವಾಲಿ ಮಾತನಾಡಿ, ಚಿತ್ರನಟ ಕಮಲಹಾಸನ್ ಹೇಳಿಕೆಯಿಂದ ಕನ್ನಡಿಗರ ಮನಸ್ಸುಗಳಿಗೆ ನೋವುಂಟು ಮಾಡಿದೆ. ಆದ್ದರಿಂದ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಅಪ್ಪಣ್ಣ ಬಾಡಗಾರ, ವ್ನಿಶ್ವರ ಹೆಬ್ಬಾರ, ಮಂಜುನಾಥ ಹೊಸಕೇರಿ, ಮಂಜುನಾಥ ದೊಡಮನಿ, ಸಂತೋಷ ನಿರಂಜನ, ಅಪ್ಪು ಸಿರಿಯನ್ನವರ, ವಿಶ್ವನಾಥ ಕಡಕೋಳ, ಶಶಿಕಾಂತ ನೆಲ್ಲೂರ ಇತರರಿದ್ದರು.