ಕಮಡೊಳ್ಳಿಯಲ್ಲಿ ಅಯ್ಯಪ್ಪ ಮಹಾಪೂಜೆ

Published on

ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಕಮಡೊಳ್ಳಿಯ ಕನ್ನಡ ಶಾಲೆಯಲ್ಲಿ ಜ್ಯೋತಿ ಸ್ವರೂಪ ಅಯ್ಯಪ್ಪಸ್ವಾಮಿ ಭಕ್ತವೃಂದದ ವತಿಯಿಂದ ಅಯ್ಯಪ್ಪಸ್ವಾಮಿ ಮಹಾಪೂಜೆಯನ್ನು ಜ. 5ರಂದು ಏರ್ಪಡಿಸಲಾಗಿದೆ.

ಅಂದು ಬೆಳಗ್ಗೆ 6.15ಕ್ಕೆ ಅಯ್ಯಪ್ಪಸ್ವಾಮಿ ಪುಷ್ಪಾರ್ಚನೆ, ಗ್ರಾಮದ ಸಕಲ ದೇವತೆಗಳಿಗೆ ಉಡಿ ತುಂಬುವ ಕಾರ್ಯಕ್ರಮ, ಗ್ರಾಮದ ಬೀದಿಗಳಲ್ಲಿ ಕುಂಭ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ ಜರುಗಲಿದೆ.

ಸಂಜೆ 6ಕ್ಕೆ ಅಯ್ಯಪ್ಪಸ್ವಾಮಿ ಮಹಾಪೂಜೆ ನಂತರ ಎಣ್ಣೆ ಸೇವೆ ನಡೆಯಲಿದೆ. ನೂಲ್ವಿಯ ಶ್ರೀ ಪ್ರಭು ಗುರುಸ್ವಾಮಿ, ಶ್ರೀ ನಾಗು ಗುರುಸ್ವಾಮಿಗಳು ಸಾನ್ನಿಧ್ಯ ವಹಿಸುವರು.

ಜ. 9ರಂದು ಬೆಳಗ್ಗೆ ಇರುಮುಡಿ ಕಾರ್ಯಕ್ರಮ ನಂತರ ಶಬರಿಮಲೆ ಯಾತ್ರೆ ಕೈಗೊಳ್ಳಲಿದ್ದಾರೆ. ಭಕ್ತರು ಪಾಲ್ಗೊಳ್ಳಬೇಕೆಂದು ಪ್ರಕಟಣೆ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net