ಕಲಿಯುಗ ಕಾಮಧೇನು ಗುರುರಾಯರು

Kamadhenu Gururaya of Kaliyuga
Kamadhenu Gururaya of Kaliyuga
Published on

ಲೋಕಾಪುರ: ಕಲಿಯುಗದ ಕಲ್ಪವೃಕ್ಷ ಕಾಮಧೇನು ಪರಮ ಕರುಣಾಸಾಗರ ಶ್ರೀ ರಾಘವೇಂದ್ರ ತೀರ್ಥರ ನಾಮ ಸ್ಮರಣೆಯೇ ಪರಮ ಮಂಗಳಕರ ಎಂದು ಬಾಗಲಕೋಟೆಯ ಬಿಂಧುಮಾಧವಚಾರ್ಯ ನಾಗಸಂಪಗಿ ಹೇಳಿದರು.

ಪಟ್ಟಣದ ರಾಘವೇಂದ್ರ ಮಠದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ 404 ಪಟ್ಟಾಭಿಷೇಕ ಮಹೋತ್ಸವ ನಿಮತ್ತ ಪ್ರವಚನದಲ್ಲಿ ಮಾತನಾಡಿದ ಅವರು, ಶ್ರೀ ಗುರುರಾಯರು ಕಲಿಯುಗ ಕಾಮಧೇನುವಾಗಿ ಸರ್ವರ ಕಷ್ಟಗಳನ್ನು ಪರಿಹರಿಸುತ್ತಿರುವ ಮಹಾತ್ಮರು, ಅವರನ್ನು ಮನದಲ್ಲಿ ನನೆದರೆ ಸಾಕು ನಮ್ಮನ್ನು ಮಗುವಿನಂತೆ ಸಲಹುತ್ತಾರೆ. ನಾನು ಎಲ್ಲಿಯೇ ಇರಲಿ ಪ್ರತಿವರ್ಷ ರಾಯರ ಆರಾಧನೆ, ಪಟ್ಟಾಭಿಷೇಕದಲ್ಲಿ ಪಾಲ್ಗೊಳ್ಳುವ ಪದ್ಧತಿ ಪಾಲಿಸಿಕೊಂಡು ಬರುತ್ತಿದ್ದೇನೆ. ಗುರುಗಳ ಕೃಪೆಯಿಂದ ನನಗೆ ರಾಯರ ಆಶೀರ್ವಾದ ಸದಾ ದೊರೆತಿದೆ ಎಂದರು.

ಪಟ್ಟಾಭಿಷೇಕದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಗ್ಗೆ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ರ, ಪಲ್ಲಕ್ಕಿ ಸೇವೆ, ಅಲಂಕಾರ, ತೀರ್ಥ ಪ್ರಸಾದ, ರಥೋತ್ಸವ ವೇಳೆ ಮಹಿಳೆಯರ ಕೋಲಾಟ, ಯುವಕರ ಭಜನೆ, ವಿವಿಧ ವಾದ್ಯಮೇಳಗಳೊಂದಿಗೆ ಸಂಭ್ರಮದಿಂದ ನಡೆಯಿತು.

ವಿಪ್ರ ಸಮಾಜದ ಮುಖಂಡರಾದ ನಿವೃತ್ತ ಶಿಕ್ಷಕ ಗುರುರಾಜ ಜೋಶಿ, ಬಿ.ಎಲ್. ಬಬಲಾದಿ, ಬಿ.ಡಿ.ಚಿನಗುಂಡಿ, ಲಕ್ಷ್ಮೀಕಾಂತ ದೇಶಪಾಂಡೆ, ಆರ್.ಎಸ್.ಜೋಶಿ, ಗೋವಿಂದ ದೇಶಪಾಂಡೆ, ಗಿರೀಶ ಚಿನಗುಂಡಿ, ಅಣ್ಣಾರಾವ ದೇಶಪಾಂಡೆ, ವಿಜಯಕುಮಾರ ದೇಶಪಾಂಡೆ, ಅರ್ಚಕ ಆನಂದಚಾರ್ಯ ಜಂಬಗಿ, ಗೋವಿಂದ ಕುಲಕರ್ಣಿ, ರಮೇಶ ಕುಲಕರ್ಣಿ, ಕೆ.ವಿ.ಕುಲಕರ್ಣಿ, ಸಂತೋಷ ದೇಶಪಾಂಡೆ, ಪ್ರವೀಣ ಸೋಮಾಪುರ, ಅಪ್ಪಾರಾವ ದೇಶಪಾಂಡೆ, ವಾದಿರಾಜ ಕುಲಕರ್ಣಿ, ಸಮೀರ ಜೋಶಿ, ಜಯತೀರ್ಥ ಜೋಶಿ, ಸಂತೋಷ ಕುಲಕರ್ಣಿ, ರಾಹುಲ ಗೂಡುರ, ಸುಶೀಲೇಂದ್ರ ದೇಶಪಾಂಡೆ, ರಾಘವೇಂದ್ರ ಸೇವಾ ಸಮಿತಿ, ಗುರು ಸಾರ್ವಭೌಮ ಯುವಕ ಮಂಡಳ ಹಾಗೂ ಗಾಯತ್ರಿ ಭಜನಾ ಮಂಡಳದ ಸರ್ವ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net