

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಶ್ರೀ ಮೈಲಾರಲಿಂಗ ನಗರದಲ್ಲಿನ ಸ್ವಯಂಸಿದ್ಧ ಶ್ರೀ ಮಲ್ಹಾರಿ ದೇವಸ್ಥಾನದಲ್ಲಿ ಮೇ ೧೩ರಂದು ಶ್ರೀ ಗಂಗಾ ಮಾಲ್ಹಸಾ ಮಾರ್ತಾಂಡ ಭೈರವ ದೇವರ ೩೨ನೇ ಕಲ್ಯಾಣೋತ್ಸವ ಏರ್ಪಡಿಸಲಾಗಿದೆ.
ಅಂದು ಬೆಳಗ್ಗೆ ೬ ಗಂಟೆಗೆ ದೇವರಿಗೆ ಕಾಕಡಾರತಿ ಧ್ವಜಾರೋಹಣ, ಬೆಳಗ್ಗೆ ೭ ಗಂಟೆಗೆ ರುದ್ರಾಭಿಷೇಕ, ದೇವಿಗೆ ಉಡಿ ತುಂಬುವುದು, ೧೦ ಗಂಟೆಗೆ ಪುಣ್ಯಾಹವಾಚನ ನಾಂದಿ ಹಾಗೂ ೧೨.೨೬ಕ್ಕೆ ಕಲ್ಯಾಣೋತ್ಸವ ನೆರವೇರಲಿದೆ. ಮಧ್ಯಾಹ್ನ ೧ ಗಂಟೆಗೆ ಪಲ್ಲಕ್ಕಿ ಉತ್ಸವ, ೧.೩೦ಕ್ಕೆ ರಥೋತ್ಸವ, ನಂತರ ಶ್ರೀ ಮಾಲ್ಹಸಾ ಮಾರ್ತಾಂಡ ಭೈರವ ದೇವರಿಗೆ ಡೋಣಿ ತುಂಬಿಸುವುದು, ಮಹಾ ಮಂಗಳಾರತಿ, ಗೊರಪ್ಪಗಳಿಂದ ಮತ್ತು ಕುದುರೆಕಾರರಿಂದ ಶ್ರೀ ಮಲ್ಹಾರಿ ಸಂಪ್ರದಾಯದ ವಿವಿಧ ಸೇವೆಗಳು ನಡೆಯಲಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.