ಹೊನ್ನಳ್ಳಿ - ಬ್ರಹ್ಮದೇವನಮಡು ಕಲ್ಯಾಣದೇಶ್ವರ ಅದ್ದೂರಿ ರಥೋತ್ಸವ

Honnalli - Kalyanadeshwar Rathotsava of Brahmadevanamadu village
ಸಿಂದಗಿ ತಾಲೂಕು ಹೊನ್ನಳ್ಳಿ- ಬ್ರಹ್ಮದೇವನಮಡು ಗ್ರಾಮದ ಕಲ್ಯಾಣದೇಶ್ವರ ರಥೋತ್ಸವ ಭಾನುವಾರ ಸಂಜೆ ಅದ್ದೂರಿಯಾಗಿ ಜರುಗಿತು.
Published on

ಬ್ರಹ್ಮದೇವನಮಡು: ಸಿಂದಗಿ ತಾಲೂಕು ಹೊನ್ನಳ್ಳಿ - ಬ್ರಹ್ಮದೇವನಮಡು ಗ್ರಾಮದ ಕಲ್ಯಾಣದೇಶ್ವರ ರಥೋತ್ಸವ ಭಾನುವಾರ ಸಂಜೆ ಅದ್ದೂರಿಯಾಗಿ ಜರುಗಿತು.

ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಜಯಘೋಷ ಕೂಗಿ ಭಕ್ತಿ ಮೆರೆದರು. ಡೊಳ್ಳು ಸೇರಿ ವಿವಿಧ ವಾದ್ಯ ವೈಭವಗಳು ರಥೋತ್ಸವಕ್ಕೆ ಮೆರಗು ತಂದವು. ಬೆಳಗ್ಗೆ ಕಲ್ಯಾಣದೇಶ್ವರ ಕರ್ತೃ ಗದ್ದುಗೆಗೆ ಅಭಿಷೇಕ ಮತ್ತು ವಿಶೇಷ ಪೂಜೆ ಸಲ್ಲಿಸಲಾಯಿತು. ಆಲೂರು ಕೆಂಚವೃಷಭೇಂದ್ರ ಶಿವಾಚಾರ್ಯರು ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಕಲ್ಯಾಣದಯ್ಯ ವೀರಘಂಟಯ್ಯ ಸ್ವಾಮೀಜಿ,ದಂಡಸೋಲಾಪುರದ ಬಸಯ್ಯ ಸ್ವಾಮೀಜಿ, ವಡಗೇರಿಯ ವೀರಯ್ಯ ಸ್ವಾಮೀಜಿ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net