ವೈಭವದ ಕಲ್ಯಾಣೋತ್ಸವ ಸಂಪನ್ನ

MAR.. 19, HNP., PH.2.
Published on

ಹೊಳೆನರಸೀಪುರ: ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಧ್ವಜಾರೋಹಣೋತ್ಸವ ಹಾಗೂ ಸ್ವಾಮಿಯ ಕಲ್ಯಾಣೋತ್ಸವ ಮಂಗಳವಾರ ವೈಭವದಿಂದ ನೆರವೇರಿತು. ಲಕ್ಷ್ಮೀ ನರಸಿಂಹಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ವಿಶೇಷ ಪೂಜಾದಿಗಳು ಈಗಾಗಲೇ ಚಾಲನೆ ಪಡೆದಿದ್ದು, ಪ್ರತಿದಿನ ಬ್ರಾಹಿಹ್ಮೀ ಮಹೂರ್ತದಲ್ಲಿ ಸ್ವಾಮಿಯ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ನೈವೇದ್ಯ, ತಧಿ ಆರಾಧನೆ ಸೇವೆ, ಸಹಸ್ರನಾಮಾರ್ಚನೆ, ಮಂಗಳಾರತಿ ನೆರವೇರಿಸಲಾಗುತ್ತಿದೆ. ಸಂಜೆ ಗೋಧೂಳಿ ಲಗ್ನದಲ್ಲಿ ಬ್ರಹ್ಮ ರಥೋತ್ಸವ ಪ್ರಯುಕ್ತ ಛೇರಿ ತಾಡನ, ದಿಗ್ಬಲಿ ಹಾಗೂ ಇತ್ಯಾದಿ ಸೇವೆಗಳ ನಂತರ ಧ್ವಜಾರಹಣೋತ್ಸವ, ಕಲ್ಯಾಣೋತ್ಸವಗಳು ನಿತ್ಯವೂ ಜರುಗುತ್ತಿವೆ.
ಹಿರಿಯ ಅರ್ಚಕರಾದ ರಾಮಸ್ವಾಮಿಭಟ್ಟರ ಮಾರ್ಗದರ್ಶನದಲ್ಲಿ ಅಕ್ಕಿಹೆಬ್ಬಾಳು ಶ್ರೀಧರ ಭಟ್ಟರ್, ನಾರಾಯಣ ಭಟ್ಟರ್, ರಾಮಪ್ರಸಾದ್, ವೆಂಕಟ ನರಸಿಂಹನ್, ಸಿಂಹಾದ್ರಿ ನರಸಿಂಹನ್ ಹಾಗೂ ವಲ್ಲಭ ಅವರು ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದಾರೆ. ಪುರಸಭಾ ಮಾಜಿ ಅಧ್ಯಕ್ಷ ಎಚ್.ವಿ.ಪುಟ್ಟರಾಜು, ಮುಖಂಡರಾದ ಲಿಖಿಲ್, ಕುಮಾರ್, ಕಿಟ್ಟಿ ಉಪ್ಪಾರ್, ರೇವಣ್ಣ, ಮಂಜು ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net