ಬ್ರಹ್ಮ ರಥೋತ್ಸವ ಸಂಪನ್ನ

Kalyana Mahotsava
Kalyana Mahotsava
Published on

ದೊಡ್ಡಬಳ್ಳಾಪುರ:ನಗರದ ಚೌಡೇಶ್ವರಿ ಬೀದಿಯಲ್ಲಿರುವ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯದಲ್ಲಿ ದೇವಾಂಗ ಮಂಡಳಿಯಿಂದ ಶ್ರೀ ಗಿರಿಜಾ ರಾಮಲಿಂಗೇಶ್ವರಸ್ವಾಮಿ ಕಲ್ಯಾಣ ಮಹೋತ್ಸವ ಹಾಗೂ ಬ್ರಹ್ಮ ರಥೋತ್ಸವ ಸಂಭ್ರಮದಿಂದ ನೆರವೇರಿತು. ಈ ಅಂಗವಾಗಿ ದೇವಾಲಯದಲ್ಲಿ ಅಭಿಷೇಕ, ವಿಶೇಷ ಪೂಜೆ ಜತೆಗೆ ಕಲ್ಯಾಣ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ಭಕ್ತರು ಬಾಳೆಹಣ್ಣು, ದವರ್ನ ಅರ್ಪಿಸಿ ಧನ್ಯತಾಭಾವ ಮೆರೆದರು. ಸಂಜೆ ಗಿರಿಜಾ ರಾಮಲಿಂಗೇಶ್ವರ ಸ್ವಾಮಿಯ ಉಯ್ಯಲೋತ್ಸವ ನೆರವೇರಿತು. ಗೆಳೆಯರ ಬಳಗ ಹಾಗೂ ವಿವಿಧ ಸೇವಾ ಸಮಿತಿ ವತಿಯಿಂದ ಅರವಟಿಗೆ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net