ಹುತಾತ್ಮರ ತ್ಯಾಗ, ಬಲಿದಾನ ಅವಿಸ್ಮರಣೀಯ

17 Hulsur 2
Published on

ಹುಲಸೂರು: ಅಂದಿನ ಗೃಹಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದಿಟ್ಟ ಕಾರ್ಯಾಚರಣೆ ಹಾಗೂ ಅನೇಕರ ತ್ಯಾಗ ಬಲಿದಾನದ ಫಲವಾಗಿ ಈ ಭಾಗಕ್ಕೆ ಹೈದರಾಬಾದ್ ನಿಜಾಮನಿಂದ ಮುಕ್ತಿ ದೊರೆತಿದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಸುಧಾಕರ ರೆಡ್ಡಿ ಹೇಳಿದರು.

ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ಮಂಗಳವಾರ ಗೋರ್ಟಾ(ಬಿ)ದ ಸ್ಮಾರಕ ಸ್ಥಳದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪೂರ್ತಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದ ಅವರು, ಸ್ವಾತಂತ್ರ್ಯಕ್ಕಾಗಿ ಗೋರ್ಟಾ ಸೇರಿ ಸುತ್ತಮುತ್ತಲಿನ ಗ್ರಾಮಗಳು ನಿಜಾಮರ ವಿರುದ್ಧ ರಣಕಹಳೆ ಮೊಳಗಿಸಿದ್ದವು. ಇಂಥ ಊರಿನ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಸಂತಸವಾಗಿದೆ ಎಂದರು.

ಶಾಸಕ ಶರಣು ಸಲಗರ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲ ಮಹನೀಯರನ್ನು ಗೌರವಪೂರ್ವಕವಾಗಿ ಸ್ಮರಿಸೋಣ. ಮುಂದಿನ ವರ್ಷದ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ದ ವಿಜಯೇಂದ್ರ ಅವರನ್ನು ಕರೆಸಲಾಗುವುದು ಎಂದು ಹೇಳಿದರು.

ಲಿಂಗಾಯತ ಮಹಾಮಠದ ಶ್ರೀ ಪ್ರಭುದೇವರು ಸಾನ್ನಿದ್ಯ ವಹಿಸಿದ್ದರು. ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಸರಸ್ವತಿ ಪಟ್ನೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ್ ಗಾದಗಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ರೆಡ್ಡಿ, ಪ್ರಮುಖರಾದ ಮಾಧವ ಹಾಸುರೆ, ಶಿವಾನಂದ ಮಂಠಾಳಕರ, ಸುರೇಶ ಬಿರಾದಾರ, ಗುರುನಾಥ ರಾಜಗೀರಾ, ವೀರೇಶ ಸ್ವಾಮಿ, ನಾಗೇಶ ಮೇತ್ರೆ, ಅಶೋಕ ವಕಾರೆ, ಸುಧೀರ ಕಾಡಾದಿ, ಜ್ಞಾನೇಶ್ವರ ಮುಳೆ, ನಿಲೇಶ ರಕ್ಷಾಳ, ಶಾರದಾಬಾಯಿ, ಮಹೇಶ ಪಟ್ನೆ, ಅರುಣ ತೆಲಂಗ, ಸೋಮನಾಥ ರಾಜೇಶ್ವರೆ, ಸುಭಾಷ ಪತಂಗೆ, ಭರತರಾಜ ಪತಂಗೆ, ರವಿ ಕಾದೇಪುರೆ, ಬಸವರಾಜ ಪಾಟೀಲ್ ಇತರರಿದ್ದರು. ಮಹೇಶ ಬಿರಾದಾರ ಸ್ವಾಗತಿಸಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net