ಕಕ ಉತ್ಸವವೂ ಅದ್ದೂರಿಯಾಗಿ ನಡೆಸಿ

oplus_3277824
ಬಸವಕಲ್ಯಾಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಶಾಸಕ ಶರಣು ಸಲಗರ ಮಾತನಾಡಿದರು. ಮುಕುಲ್ ಜೈನ್, ದತ್ತಾತ್ರೇಯ ಗಾದಾ, ರಾಜು ಬಣಕಾರ, ರಮೇಶ ಸುಲ್ಫಿ, ಗಣಪತಿ ಧಮ್ಮುರೆ ಇದ್ದರು.
Published on

ಬಸವಕಲ್ಯಾಣ: ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವದಂತೆ ಕಲ್ಯಾಣ ಕರ್ನಾಟಕ ಉತ್ಸವವನ್ನೂ ವಿಜೃಂಭಣೆಯಿಂದ ನಡೆಸುವ ಮನಸ್ಥಿತಿಯನ್ನು ಅಧಿಕಾರಿಗಳು ಬೆಳೆಸಿಕೊಳ್ಳಬೇಕು ಎಂದು ಶಾಸಕ ಶರಣು ಸಲಗರ ಸಲಹೆ ನೀಡಿದರು.

ತಾಲೂಕು ಆಡಳಿತದಿಂದ ನಗರದ ರಥ ಮೈದಾನ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ದೇಶ ಭಕ್ತರು, ಹೋರಾಟಗಾರರ ತ್ಯಾಗ ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವೂ ೧೩ ತಿಂಗಳು ಈ ಭಾಗಕ್ಕೆ ಸ್ವಾತಂತ್ರ್ಯದ ಸಂಭ್ರಮ ಸಿಗಲಿಲ್ಲ. ಅಂದಿನ ಗೃಹಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ದಿಟ್ಟ ಕಾರ್ಯಾಚರಣೆಯಿಂದಾಗಿ ನಿಜಾಮ ಸರ್ಕಾರ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ವಿಲೀನವಾಯಿತು ಎಂದರು.

ಸಹಾಯಕ ಆಯುಕ್ತ ಮುಕುಲ್ ಜೈನ್ ಧ್ವಜಾರೋಹಣ ನೆರವೇರಿಸಿದರು. ಮುಡಬಿ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಗಣಪತಿ ಧಮ್ಮುರೆ ವಿಶೇಷ ಉಪನ್ಯಾಸ ನೀಡಿದರು.

ನಗರಸಭೆ ಪೌರಾಯುಕ್ತ ರಾಜು ಡಿ.ಬಣಕಾರ, ತಾಪಂ ಇಒ ರಮೇಶ ಸುಲ್ಫಿ, ಸಿಪಿಐ ಅಲಿಸಾಬ್ ಇತರರಿದ್ದರು. ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ ಸ್ವಾಗತಿಸಿದರು. ಬಿಸಿಎಂ ಅಧಿಕಾರಿ ವಿ.ಬಿ. ಹಿರೇಗೌಡ ವಂದಿಸಿದರು. ಶಿವಕುಮಾರ ಜಡಗೆ ನಿರೂಪಣೆ ಮಾಡಿದರು. ಹೀರಾ ಪಬ್ಲಿಕ್ ಶಾಲಾ ಮಕ್ಕಳು ನಾಡಗೀತೆ ಹಾಗೂ ಪ್ರಾರ್ಥನೆ ಗೀತೆ ಹಾಡಿದರು.

ಪ್ರಧಾನಮಂತ್ರಿ ಸ್ವನಿಧಿ ಅನುಷ್ಠಾನದಲ್ಲಿ ಉತ್ತಮ ಪ್ರಗತಿ ಸಾಧಿಸಿ ರಾಜ್ಯ ಪ್ರಶಸ್ತಿ ಪಡೆದ ನಗರಸಭೆ ಸಿಬ್ಬಂದಿ ರಾಣಿಮಾ, ಜ್ಯೋತಿ, ಸರಸ್ವತಿ ಅವರನ್ನು ಸನ್ಮಾನಿಸಲಾಯಿತು.

ಇದಕ್ಕೂ ಮುನ್ನ ಕೋಟೆಯಿಂದ ಮುಖ್ಯರಸ್ತೆ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ಆಗಮಿಸಿ ಮರಳಿ ರಥ ಮೈದಾನ ತಲುಪಿತು. ಮಾರ್ಗದ ಕೋಟೆ, ನಗರಸಭೆ, ನೆಹರು ವೃತ್ತ, ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ರಥ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ನಿರಾಸಕ್ತಿ: ತಾಲೂಕು ಆಡಳಿತ ಆಯೋಜಿಸಿದ್ದ ಉತ್ಸವದಲ್ಲಿ ಎಂದಿನಂತೆ ಶಾಲಾ ವಿದ್ಯಾರ್ಥಿಗಳು ಮಾತ್ರ ಉತ್ಸಾಹದಿಂದ ಭಾಗವಹಿಸಿದ್ದರು. ಆದರೆ ಕೆಲ ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರ ಅನುಪಸ್ಥಿತಿ ಎದ್ದು ಕಂಡಿತು. ಅರ್ಧದಷ್ಟೂ ಅಧಿಕಾರಿಗಳು ಇರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net