`ಕಲ್ಯಾಗ ತಕ್ಕ ಮಲ್ಲಿ' ನಾಟಕ ಪ್ರದರ್ಶನ 7ರಂದು

theatre-and-masks
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಶ್ರೀ ವಾಯುಪುತ್ರ ಸಾಂಸ್ಕೃತಿಕ ಕಲಾ ಕ್ರೀಡಾ ಶಿಕ್ಷಣ ಹಾಗೂ ಗ್ರಾಮ ಅಭಿವೃದ್ಧಿ ಯುವ ಸಂಘ ಮತ್ತು ಜೇವರ್ಗಿಯ ವಿಶ್ವಜ್ಯೋತಿ ಶ್ರೀ ಪಂಚಾಕ್ಷರಿ ನಾಟ್ಯ ಸಂಘದ ಸಹಯೋಗದಲ್ಲಿ ಮಜಾಭಾರತ ಹಾಗೂ ಕಾಮಿಡಿ ಟಾಕೀಸ್ ಹಾಸ್ಯ ಕಲಾವಿದ ಬಸವರಾಜ ಗುಡ್ಡಪ್ಪನವರ ಸಹಾಯಾರ್ಥವಾಗಿ ಡಿ. 7ರಂದು ನಗರದ ಆಲೂರು ವೆಂಕಟರಾವ ಸಭಾಭವನದಲ್ಲಿ `ಕಲ್ಯಾಗ ತಕ್ಕ ಮಲ್ಲಿ' (ಗಂಡಗ ತಕ್ಕ ಹೆಂಡತಿ) ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 3ರಿಂದ 6 ಹಾಗೂ 6.30ರಿಂದ 9.30ರವರೆಗೆ 2 ಪ್ರದರ್ಶನ ಇರಲಿದೆ. ಹಾಸ್ಯ ಕಲಾವಿದ ಬಸವರಾಜ ಗುಡ್ಡಪ್ಪನವರ, ಮಜಾಭಾರತ, ಕಾಮಿಡಿ ಟಾಕೀಸ್, ಮಜಾ ಟಾಕೀಸ್, ಗಿಚ್ಚಿ ಗಿಲಿಗಿಲಿ ಖ್ಯಾತಿಯ ನೀಲಾ ಜೇವರ್ಗಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸುಜಾತಾ ಜೇವರ್ಗಿ ಮುಖ್ಯ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಟಕಕ್ಕೆ ಡಾ. ರಾಜು ತಾಳಿಕೋಟಿ, ಕಾಮಿಡಿ ಕಿಲಾಡಿ ವಿನ್ನರ್ ಹರೀಶ ಹಿರಿಯೂರ, ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ ಹಾಗೂ ಚಿಲ್ಲರ್ ಮಂಜು ಸೇರಿ ವಿವಿಧ ಕಲಾವಿದರು ಸಾಥ್ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net