ಹಟ್ಟಿಯಂಗಡಿಯಲ್ಲಿ 108 ಕಲಶಾಭಿಷೇಕ

mandala
Published on

ಕುಂದಾಪುರ: ಇತಿಹಾಸ ಪ್ರಸಿದ್ಧ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಪ್ರತಿಷ್ಠಾಪನಾ ವರ್ಧಂತಿ ಅಂಗವಾಗಿ ಬುಧವಾರ ದೇವರಿಗೆ 108 ಕಲಶಾಭಿಷೇಕ, ಕನಕಾಭಿಷೇಕ ನೆರವೇರಿಸಲಾಯಿತು.

ಧಾರ್ಮಿಕ ಮಹೋತ್ಸವ ಅಂಗವಾಗಿ ನವಗ್ರಹ ಹವನ, ಬ್ರಾಹ್ಮಣಸ್ಪತಿಸೂಕ್ತ ಹವನ, ಶ್ರೀಸೂಕ್ತ ಹವನ, ಪುರುಷ ಸೂಕ್ತ ಹವನ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮತ್ತು ಹವನ, ಧನ್ವಂತರಿ ಹವನ, ನವಾಕ್ಷರಿ ಮಂತ್ರ ಜಪ ಹಾಗೂ ಹವನ, ರುದ್ರಪಾರಾಯಣ ಹಾಗೂ ರುದ್ರ ಹವನ, ದುರ್ಗಾಹೋಮ, ಅಥರ್ವಶೀರ್ಷ ಹವನ, ಲಲಿತಾ ಸಹಸ್ರನಾಮ ಹವನ, ಚಂಡಿಕಾ ಪಾರಾಯಣ, ಅಧಿವಾಸ ಹವನ, ಕಲಾತತ್ವ ಹವನ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net