ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಕಲೋತ್ಸವ ಸಹಕಾರಿ

kalotsava
Published on

ಶಿರಹಟ್ಟಿ: ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್. ಎಸ್. ಬುರುಡಿ ಹೇಳಿದರು.

ತಾಲೂಕಿನ ಮಾಗಡಿ ಗ್ರಾಮದಲ್ಲಿ ಎನ್‌ವಿಎ ಸರ್ಕಾರಿ ಪ್ರೌಢಶಾಲೆ, ಜಿಎಂಪಿಎಸ್ ಮಾಗಡಿ, ಕೆ.ಜಿ.ಎಸ್ ಮಾಗಡಿ ಶಾಲೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಬ್ಲಾಕ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಮೊಗ್ಗು ಸುಂದರವಾಗಿ ಅರಳಿ ಸುವಾಸನೆ ನೀಡಲು ಸೂರ್ಯನ ಕಿರಣಗಳು ಹೇಗೆ ಕೆಲಸ ಮಾಡುತ್ತವೆಯೋ ಅದೇ ರೀತಿ ಪ್ರತಿಭಾ ಕಾರಂಜಿ ವೇದಿಕೆ ಕೂಡ ಮಕ್ಕಳ ಮನಸನ್ನು ಅರಳಿಸಲು ಸೂರ್ಯನ ಕಿರಣದಂತೆ ಸಹಾಯಕವಾಗಿದೆ ಎಂದರು.

ಸುಮಾರು 750 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಗದಗ ಡಯಟ್ ಅಧಿಕಾರಿ ಜಿ.ಎಲ್. ಬಾರಾಟಕ್ಕೆ ಫಲಿತಾಂಶ ಘೋಷಿಸಿದರು. ಬಿಇಒ ಎಚ್.ನಾಣಕಿ ನಾಯಕ್ ಅಧ್ಯಕ್ಷತೆ ವಹಿಸಿದ್ದರು.

ಎಸ್‌ಡಿಎಂಸಿ ಅಧ್ಯಕ್ಷ ಶಿವರಾಜಗೌಡ ಪಾಟೀಲ, ಅಶೋಕ ಪಲ್ಲೇದ, ಬಸವರಾಜ ಪಲ್ಲೇದ, ರಮೇಶ ಕುಲಕರ್ಣಿ, ಗ್ರಾ.ಪಂ. ಉಪಾಧ್ಯಕ್ಷ ಶೇಖರಪ್ಪ ಬಡ್ನಿ, ಲಲಿತವ್ವ ಪಾಟೀಲ, ಸೈನಜ್ಬಿ ಬುವ್ವಾಜಿ, ಕಸ್ತೂರೆವ್ವ ಚೌಡಿ, ಫಕೀರೇಶ ಮ್ಯಾಗೇರಿ, ವೀಣಾ ತಳವಾರ, ಗಿರಿಜವ್ವ ಹೇಳವರ, ರತ್ನವ್ವ ತೋಟರ, ಪಾಲಾಕ್ಷಪ್ಪ ಈಳಿಗೆರ, ಜಿ.ಎಲ್. ಬಾರಟಕ್ಕೆ, ಎಚ್.ಬಿ. ರಡ್ಡೇರ, ಶ್ರೀನಿವಾಸ ನಾಯಕ, ಬಿ.ಬಿ. ಕಳಸಾಪುರ, ಬಸವರಾಜ ಹರ್ಲಾಪುರ, ವೆಂಕಟೇಶ್ವರ ಅರ್ಕಸಾಲಿ, ಎಚ್.ಟಿ. ಬಿಜ್ಜೂರ, ಚಂದ್ರು ನೇಕಾರ, ಬಸವರಾಜ ಯತ್ನಳ್ಳಿ, ಡಿ.ಡಿ. ಲಮಾಣಿ, ಎ.ಎಂ. ಗುತ್ತಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net