

ಚಿತ್ರದುರ್ಗ: ತಾಲೂಕಿನ ಸೀಬಾರ-ಗುತ್ತಿನಾಡು ಸಮೀಪದ ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಶನಿವಾರ ಜಿಲ್ಲಾಮಟ್ಟದ ಕಲೋತ್ಸವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ಜಿಲ್ಲೆಯ ವಿವಿಧೆಡೆಯ 50ಕ್ಕೂ ಹೆಚ್ಚು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಆಶುಭಾಷಣ, ಜನಪದ ಗೀತೆ, ವಚನ ಗೀತೆ, ಚಿತ್ರಕಲೆ ಹಾಗೂ ಮಿಮಿಕ್ರಿ ಸ್ಪರ್ಧೆಯಲ್ಲಿ ಪಾಲ್ಗೊಂಡರು. ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕ ನೀಡಿ ಸನ್ಮಾನಿಸಲಾಯಿತು.
ಮುಖ್ಯಶಿಕ್ಷಕರಾದ ಬಿ.ಜಿ.ಶಿವರುದ್ರಯ್ಯ, ಮಲ್ಲಿಕಾರ್ಜುನ್, ಸಮೂಹ ಸಂಪನ್ಮೂಲ ವ್ಯಕ್ತಿ ಎಂ.ಎಲ್.ತಿಮ್ಮರಾಜು, ನಿವೃತ್ತ ಡಿವೈಎಸ್‌ಪಿ ಬಸವರಾಜಪ್ಪ, ಸಾಮಾಜಿಕ ಕಾರ್ಯಕರ್ತ ಗ.ರಾ.ಸುರೇಶ್, ಜಂಬೂನಾಥ್, ವೆಂಕಟಸ್ವಾಮಿ, ಜಿ.ಆರ್.ಚನ್ನಬಸಪ್ಪ, ವಿಶ್ವಮಾನವ ವಸತಿ ಶಾಲೆ ಪ್ರಾಚಾರ್ಯೆ ಎಚ್.ಆರ್.ಸುಧಾ ಇತರರಿದ್ದರು.