ಕಾಲೂರಿನಲ್ಲಿ ಮನಸೂರೆಗೊಂಡ ಕೊಡವ ಸಾಂಪ್ರದಾಯಿಕ ನೃತ್ಯ

3mdka1 - Copy
Published on
ಮಡಿಕೇರಿ: ಕಾಲೂರಿನ ಸುಂದರ ಪರಿಸರದ ನಡುವೆ ಕೊಡವ ಸಾಂಪ್ರದಾಯಿಕ ನೖತ್ಯ ಪ್ರಕಾರಗಳು ಪ್ರದಶಿ೯ತವಾಗಿ ನೋಡುಗರ ಮನಸೂರೆಗೊಂಡವು. ಭಾರತೀಯ ವಿದ್ಯಾಭವನ ಮತ್ತು ಇನ್ಪೋಸೀಸ್ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಭಾರತೀಯ ವಿದ್ಯಾಭವನದ ಯಶಸ್ವಿ ಕ್ಯಾಂಪಸ್ ನಲ್ಲಿ ಆಯೋಜಿತವಾಗಿದ್ದ ಸಾಂಸ್ಕೖತಿಕ ಕಾಯ೯ಕ್ರಮದಲ್ಲಿ ಕಾಲೂರು ಗ್ರಾಮದ ಮುತ್ತುನಾಡು ಅಭಿಮಾನಿ ಒಕ್ಕೂಟ, ಪೊಮ್ಮಕ್ಕಡ ಒಕ್ಕೂಟದ  ಕಲಾವಿದರು ಪ್ರದಶಿ೯ಸಿದ ನೖತ್ಯ, ಹಾಡುಗಳು ಗ್ರಾಮಸ್ಥರು,ಕಲಾಪ್ರೇಮಿಗಳ ಮೆಚ್ಚುಗೆ ಗಳಿಸಿದವು.
ಗ್ರಾಮೀಣ ಜಾನಪದ ಕಲಾವಿದರಿಗೆ ಪ್ರೋತ್ಸಾಹ ನೀಡಿಕೆ ಮತ್ತು ಕಲಾಪ್ರಕಾರಗಳ ಸಂರಕ್ಷಣೆಯ ನಿಟ್ಟಿನಲ್ಲಿ ಭಾರತೀಯ ವಿದ್ಯಾಭವನ ಹಾಗೂ ಇನ್ಫೋಸೀಸ್ ಫೌಂಡೇಶನ್ ಆಯೋಜಿಸಿದ 81 ನೇ ಪ್ರದಶ೯ನ ಕಾಲೂರಿನಲ್ಲಿ ಜರುಗಿತು.

ಕೊಡಗಿನ ಪ್ರಾಚೀನ ಕಲಾಪ್ರಕಾರಗಳಿಗೆ ಜೀವಂತಿಕೆ ತುಂಬುತ್ತಲೇ ಇರುವ ಕಾಲೂರು ಹಳ್ಳಿಯ ಕಲಾವಿದರು  ಉಮ್ಮತ್ತಾಟ್, ಕತ್ತಿಯಾಟ್, ವಾಲಗತ್ತಾಟ್ ಪ್ರದಶಿ೯ಸಿದರು. ಅಂತೆಯೇ ತಾಳಿಪಾಟ್ ಹಾಗೂ ಕೊಡವ ಹಾಡುಗಳು ಕೂಡ ವೀಕ್ಷಕರ ಮನಮೆಚ್ಚುಗೆ ಗಳಿಸಿದವು. ಕೊಡವ ಜನಾಂಗವು ತಮ್ಮ ಸಂಪ್ರದಾಯಿಕ ಕಲೆಯ ಬಗ್ಗೆ ಹೊಂದಿರುವ ಅಭಿಮಾನ ಮತ್ತು ಇಂದಿಗೂ ಪರಂಪರಾಗತ ಕಲೆಯನ್ನು ಲವಲವಿಕೆಯಿಂದ ಮುಂದುವರೆಸಿಕೊಂಡು ಬರುತ್ತಿರುವ ಬಗ್ಗೆ ಭಾರತೀಯ ವಿದ್ಯಾಭವನದ ನಿದೇ೯ಶಕರಾದ  ಅಶೋಕ್ ಕುಮಾರ್, ನಾಗಲಕ್ಷ್ಮಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಾಜೆಕ್ಟ್ ಕೂಗ್೯ನ ನಿದೇ೯ಶಕಿ ನಯನ ಕಶ್ಯಪ್ ಸ್ವಾಗತಿಸಿ, ಗೌರಿ ಕಶ್ಯಪ್, ಭುವನೇಶ್ವರಿ ಅಶೋಕ್ ನಿರೂಪಿಸಿದರು.  ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಗೌರವ ಕಾಯ೯ದಶಿ೯ ಬಾಲಾಜಿ ಕಶ್ಯಪ್ ಹಾಜರಿದ್ದರು.
ಭಾನುವಾರ ಸಂಜೆ  ಕೊಳಲು ವಾದನ. ಕಾಲೂರಿನ ಯಶಸ್ವಿನಿ ಕ್ಯಾಂಪಸ್ ನಲ್ಲಿ ಭಾರತೀಯ ವಿದ್ಯಾಭವನ ಇನ್ಪೋಸೀಸ್ ಫೌಂಡೇಶನ್ ವತಿಯಿಂದ ಏಪ್ರಿಲ್ 4 ರಂದು ಸಂಜೆ 4.30 ಗಂಟೆಗೆ ಸಾಂಸ್ಕತಿಕ ಕಾಯ೯ಕ್ರಮ ಆಯೋಜಿತವಾಗಿದೆ. ಹೆಸರಾಂತ ವಿದ್ಯಾನ್ ಹೇಮಂತ - ಹೇರಂಭ ಸಹೋದರರ ಕೊಳಲು ವಾದನ ಜರುಗಲಿದೆ. ಸಾಂಸ್ಕೖತಿಕ ಕಾಯ೯ಕ್ರಮದ ಸಮಾರೋಪದಲ್ಲಿ ಶಾಸಕ ಕೆ.ಜಿ.ಬೋಪಯ್ಯ, ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ ಪಾಲ್ಗೊಳ್ಳಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net