ಸಂಭ್ರಮದ ಕಲ್ಮೇಶ್ವರ ಕಾರ್ತಿಕೋತ್ಸವ

NRL 1
Published on

ನರೇಗಲ್ಲ: ಪಟ್ಟಣದ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಭಾನುವಾರ ಹೊತ್ಸಲ ಹುಣ್ಣಿಮೆ ದಿನದಂದು ಸಹಸ್ರಾರು ಭಕ್ತರ ಜಾಗೃತಿ ದೇವರಾದ ಶ್ರೀ ಕಲ್ಮೇಶ್ವರ ಕಾರ್ತಿಕೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು. ಕಾರ್ತಿಕೋತ್ಸವ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ ಶ್ರೀ ಕಲ್ಮೇಶ್ವರನಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಶಿವಾಷ್ಟೊತ್ತರ ಮಹಾಮಂಗಳಾರತಿ ನೆರವೇರಿಸಲಾಯಿತು. ಸಂಜೆ 7ಗಂಟೆಗೆ ದೇವಸ್ಥಾನದ ಅರ್ಚಕ ಬಾಬುರಾವ ಕಾಳೆ ನೇತೃತ್ವದಲ್ಲಿ ದೀಪಸ್ತಂಭಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಓಣಿಯ ಹಿರಿಯರು ದೀಪಸ್ತಂಬಕ್ಕೆ ದೀಪ ಹಚ್ಚುವ ಮೂಲಕ ಚಾಲನೆ ನೀಡಿದರು. ನಂತರ ಭಕ್ತರು ದೀಪ ಹಚ್ಚುವ ಮೂಲಕ ಕಾರ್ತಿಕೋತ್ಸವ ವೈಭವದಿಂದ ಆಚರಿಸಿದರು. ನಂತರ ಪ್ರಸಾದ ವಿತರಣೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net