ಕಲ್ಮೇಶ್ವರ ಜಾತ್ರೆ ಸಂಪನ್ನ

26Athanigrameen3
Published on

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಕಲ್ಮೇಶ್ವರ ದೇವರ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಂಗಳವಾರ ಸಂಭ್ರಮದಿಂದ ನೆರವೇರಿತು. ಬೆಳಗ್ಗೆ ದೇವರ ಗದ್ದುಗೆಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಗ್ರಾಮಸ್ಥರು ನೈವೇದ್ಯ ಅರ್ಪಿಸಿ ದರ್ಶನ ಪಡೆದರು. ಸುಮಂಗಲೆಯರ ಉಡಿ ತುಂಬಲಾಯಿತು.

ಅಥಣಿ ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಗ್ರಾಮದ ಹಿರೇಹಳ್ಳದ ಬಾಂದಾರಗೆ ಬಾಗಿನ ಅರ್ಪಿಸಿದರು. ದೇವಸ್ಥಾನಕ್ಕೆ ತೆರಳಿದ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ಪಲ್ಲಕ್ಕಿ ಮೆರವಣಿಗೆಯಲ್ಲಿ ಕುಂಭ ಮೆರವಣಿಗೆ, ಕಲಾತಂಡಗಳು ಕಳೆಗಟ್ಟಿದವು. ಮುದುಕಣ್ಣವರ ಕುಟುಂಬಸ್ಥರು ಅನ್ನಸಂತರ್ಪಣೆ ಏರ್ಪಡಿಸಿದ್ದರು. ಭಜನೆ, ಡೊಳ್ಳು ಹಾಗೂ ಶಹನಾಯಿ ಕಲಾಪ್ರದರ್ಶನ ಜನರ ಮನಸೆಳೆಯಿತು.

ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ, ಶಿವಗೌಡ ನೇಮಗೌಡ, ಮಲ್ಲಿಕಾರ್ಜುನ ಪರಾಂಡೆ, ಡಾ.ಮಲ್ಲಿಕಾರ್ಜುನ ಹಿರೇಮಠ, ಸಿದರಾಯ ಪೂಜಾರಿ, ಕಸ್ತೂರಿ ಮಾಳಿ, ರಮೇಶ ಮುದಕಣ್ಣವರ, ಮಲ್ಲಪ್ಪ ನೇಮಗೌಡ, ಹಣಮಂತ ಪೂಜಾರಿ, ಅನಿಲ ಕುಂಬಾರ, ತಂಗೆವ್ವ ಪಡಸಲಗಿ, ರೇಖಾ ಮಾಳಿ, ಗಂಗವ್ವ ಕುಂಬಾರ, ಗಿರೀಜಾ ಕುಲಕರ್ಣಿ, ಛಾಯಾ ದಾಮಾಪುರ, ಛಾಯಾ ತಳವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net