

ವಿಜಯವಾಣಿ ಸುದ್ದಿಜಾಲ ಧಾರವಾಡ
ಶತಮಾನ ಕಂಡ, ಇಲ್ಲಿನ ಕೆಲಗೇರಿ ಕೆರೆ ದಂಡೆ ಮೇಲಿರುವ ಶ್ರೀ ಕಲ್ಮೇಶ್ವರ ದೇವರ ಜಾತ್ರಾ ಮಹೋತ್ಸವ ಏ. 29 ರಿಂದ ಮೇ 3ರ ವರೆಗೆ ಜರುಗಲಿದೆ.
ಏ. 29ರಂದು ಬೆಳಗ್ಗೆ 9ಕ್ಕೆ ಸುಳ್ಳದ ಪಂಚಗೃಹ ಹಿರೇಮಠದ ಶಿವಸಿದ್ಧ ರಾಮೇಶ್ವರ ಸ್ವಾಮೀಜಿ ಕಳಸಾರೋಹಣ ನೆರವೇರಿಸುವರು. ಏ. 30ರಂದು ಬೆಳಗ್ಗೆ 5 ಗಂಟೆಗೆ ಕಲ್ಮೇಶ್ವರ ಸ್ವಾಮಿಗೆ ಪ್ರಧಾನ ಅರ್ಚಕ ಬಸಯ್ಯ ಹಿರೇಮಠ ಅವರಿಂದ ಮಹಾರುದ್ರಾಭಿಷೇಕ, ಮಹಾಮಂಗಳಾರತಿ ನಡೆಯಲಿದೆ. 8ಕ್ಕೆ ಪುರವಂತರಿಂದ ಅಗ್ನಿ ಹಾಯುವ ಕಾರ್ಯಕ್ರಮ, ಮಧ್ಯಾಹ್ನ 12.30ಕ್ಕೆ ಸಾಮೂಹಿಕ ವಿವಾಹ ನೆರವೇರಲಿವೆ.
ಸಂಜೆ 4.30ಕ್ಕೆ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶಿವಸಿದ್ಧ ರಾಮೇಶ್ವರ ಸ್ವಾಮೀಜಿಗಳಿಂದ ಮಹಾರಥೋತ್ಸವ ಜರುಗಲಿದೆ. ರಾತ್ರಿ 10.30ಕ್ಕೆ ಕೆಲಗೇರಿಯ ಸಿದ್ಧಲಿಂಗೇಶ್ವರ ನವ ತರುಣ ನಾಟ್ಯ ಸಂಘದಿಂದ ಆದರ್ಶ ಸಹೋದರ ನಾಟಕ ಪ್ರದರ್ಶನ ನಡೆಯಲಿದೆ. ಮೇ. 2ರಂದು ಕಿರಣ ಮೆಲೋಡಿಯಸ್ನ ಮಲ್ಲೇಶಿ ಹಳಕಟ್ಟಿ ಹಾಗೂ ತಡದಿಂದ ರಾತ್ರಿ 8ಕ್ಕೆ ಮನರಂಜನೆ, ಮೇ 3ರಂದು ಕಲ್ಮೇಶ್ವರ ಗೆಳೆಯರ ಬಳಗದಿಂದ ಬೆಳಗ್ಗೆ 10ಕ್ಕೆ ನಿಧಾನ ಬೈಕ್ ರೈಡಿಂಗ್, ಸಂಜೆ 4ಕ್ಕೆ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಏರ್ಪಡಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.