

ಕವಿತಾಳ: ಪಟ್ಟಣದ ಕಲ್ಮಠವು ಭಾವೈಕ್ಯದ ಕೇಂದ್ರವಾಗಿದೆ ಎಂದು ಮಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಇಲ್ಲಿನ ಮಠದಲ್ಲಿ ಶುಕ್ರವಾರ ಯಡಿಯೂರ ಸಿದ್ಧಲಿಂಗೇಶ್ವರ ಪುರಾಣ ಮಂಗಲ ಕಾರ್ಯಕ್ರಮ ನಂತರ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಿದ ಮುಸ್ಲಿಮರನ್ನು ಸನ್ಮಾನಿಸಿ ಮಾತನಾಡಿದರು. ಶ್ರೀಮಠವು ಭಕ್ತರದ್ದಾಗಿದೆ. ಇಲ್ಲಿ ಎಲ್ಲ ಜಾತಿ ಜನಾಂಗದವರು ಬಂದು ಹೋಗುತ್ತಾರೆ. ಪಟ್ಟಣದಲ್ಲಿ ಎಲ್ಲರೂ ಕೂಡಿ ಬಾಳುವ ಮುಖಾಂತರ ಭಾವೈಕ್ಯೆದಿಂದ ಇದ್ದಾರೆ. ಹಿರಿಯ ಶ್ರೀಗಳು ಭಾವೈಕ್ಯದ ಕೇಂದ್ರವಾಗಿ ಬೆಳೆಸಿದ್ದಾರೆ ಎಂದರು.
ಪಪಂ ಮಾಜಿ ಸದಸ್ಯ ಖಾಜಾ ಪಾಷಾ ಮಾತನಾಡಿ, ಪಟ್ಟಣದಲ್ಲಿ ಹಿಂದು ಮುಸ್ಲಿಮರು ಸಹೋದರಂತೆ ಇದ್ದು, ಮಠದ ಪ್ರತಿ ಕಾರ್ಯಕ್ರಮದಲ್ಲಿ ನಾವು ಬಾಗವಹಿಸುತ್ತೇವೆ ಎಂದರು. ಸಿಂಧನೂರಿನ ಸೋಮನಾಥ ಶಿವಾಚಾರ್ಯರು, ಸುಲ್ತಾನಪುರದ ಶಂಭುನಾಥ ಶಿವಾಚಾರ್ಯರು, ಪಪಂ ಸದಸ್ಯ ರುಕ್ಮದ್ದೀನ್, ಪ್ರಮುಖರಾದ ಮಕ್ತಂಸಾಬ್, ಬಾಬು ಗಣದಿನ್ನಿ, ಮೋಯಿನ್, ಮುಸ್ತಫಾ ಒಂಟಿಬಂಡಿ, ತಾಜುದ್ದೀನ್, ಗಫೂರ್‌ಸಾಬ್, ಸುಭಾಷ್ ಗೌಡ, ಅಮರೇಶ ದಿನ್ನಿ ಇತರರಿದ್ದರು.