

ಉಪ್ಪಿನಬೆಟಗೇರಿ: ಪವಾಡ ಪುರುಷ ಶ್ರೀ ಮಡಿವಾಳ ಶಿವಯೋಗಿಗಳ ಇಚ್ಛೆಯಂತೆ ಎಲ್ಲರೂ ತಮ್ಮ ಜೀವನದುದ್ದಕ್ಕೂ ಸಮರ್ಪಣಾ ಭಾವ ಅಳವಡಿಸಿಕೊಂಡು ಬದುಕಬೇಕು ಎಂದು ಹರಿಹರ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.
ಶ್ರಾವಣ ಮಾಸದ ಅಂಗವಾಗಿ ಸಮೀಪದ ಗರಗ ಗ್ರಾಮದ ಶ್ರೀ ಚನ್ನಬಸವ ಸ್ವಾಮೀಜಿ ನಿಲಯದಲ್ಲಿ ಶ್ರೀ ಜಗದ್ಗುರು ಮಡಿವಾಳೇಶ್ವರ ಕಲ್ಮಠ ಟ್ರಸ್ಟ್ ವತಿಯಿಂದ ಸೋಮವಾರ ಏರ್ಪಡಿಸಿದ್ದ ಅಧ್ಯಾತ್ಮ ಹಾಗೂ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಗರಗ-ಹಂಗರಕಿ ಗ್ರಾಮಸ್ಥರೆಲ್ಲ ಒಟ್ಟಾಗಿ ಸೇರಿಕೊಂಡು ಜಗದ್ಗುರು ಮಡಿವಾಳೇಶ್ವರ ಕಲ್ಮಠಕ್ಕೆ ಆದಷ್ಟು ಬೇಗ ಪೀಠಾಧ್ಯಕ್ಷರನ್ನು ನೇಮಿಸಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಅಮೃತ ದೇಸಾಯಿ, ಗರಗ ಶ್ರೀ ಮಡಿವಾಳೇಶ್ವರ ಟ್ರಸ್ಟ್ ಕಾರ್ಯಾಧ್ಯಕ್ಷ ಅಶೋಕ ದೇಸಾಯಿ ಮಾತನಾಡಿದರು.
ಚನಬಸಪ್ಪ ಕಿರಮರಿ, ಮಡಿವಾಳಪ್ಪ ಪೆಂಡಾರಿ, ಈರಣ್ಣ ದೊಡಮನಿ, ನಿಂಗನಗೌಡ ನಾಗನಗೌಡ್ರ, ಮಡಿವಾಳಪ್ಪ ನೀರಲಕಟ್ಟಿ, ಮನೋಜಕುಮಾರ ಗದಗಿನ, ಗದಿಗೆಪ್ಪ ನವನಿ, ಮಡಿವಾಳಯ್ಯ ಹಿರೇಮಠ, ಶಿವಾನಂದ ಉಳವಣ್ಣವರ, ಸತೀಶ ಶಟೋಜಿ, ಬಸವರಾಜ ಕಮ್ಮಾರ, ಮಡಿವಾಳಪ್ಪ ಉಳವಣ್ಣವರ ಇತರರು ಉಪಸ್ಥಿತರಿದ್ದರು.
ಧಾರ್ವಿುಕ ಕಾರ್ಯಕ್ರಮಕ್ಕೂ ಮುನ್ನ ಗುರು ಮಡಿವಾಳೇಶ್ವರರ ಕರ್ತೃ ಗದ್ದುಗೆಯ ಪೂಜೆಯಲ್ಲಿ ಪಾಲ್ಗೊಂಡು ದರ್ಶನ ಪಡೆದರು. ಈ ವೇಳೆ ಮಠದಲ್ಲಿ ಜರುಗುವ ಅನ್ನದಾಸೋಹಕ್ಕೆ 1ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿದರು.