ಕಲ್ಮಂಗಿಯಲ್ಲಿ ಶರಣಬಸವೇಶ್ವರ ಪುರಾಣ ಮಂಗಲ

snd sravana
ಸಿಂಧನೂರು ತಾಲೂಕಿನ ಕಲ್ಮಂಗಿ ಗ್ರಾಮದಲ್ಲಿ ತ್ರಿವಿಧ ದಾಸೋಹ ಮೂರ್ತಿ ಕಲಬುರಗಿಯ ಶ್ರೀ ಶರಣಬಸವೇಶ್ವರರ 36 ನೇ ವರ್ಷದ ಪುರಾಣ ಪ್ರವಚನ ಮಹಾಮಂಗೋತ್ಸವ ಅಂಗವಾಗಿ 101 ಕುಂಭ ಮೆರವಣಿಗೆ ನಡೆಯಿತು.
Published on

ಸಿಂಧನೂರು: ತಾಲೂಕಿನ ಕಲ್ಮಂಗಿ ಗ್ರಾಮದಲ್ಲಿ ತ್ರಿವಿಧ ದಾಸೋಹ ಮೂರ್ತಿ ಕಲಬುರಗಿ ಶ್ರೀ ಶರಣಬಸವೇಶ್ವರ 36ನೇ ವರ್ಷದ ಪುರಾಣ ಪ್ರವಚನ ಮಹಾಮಂಗೋತ್ಸವ ಹಾಗೂ ಕುಂಭಾಭಿಷೇಕ ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ಬೆಳಗ್ಗೆ ಶರಣಬಸವೇಶ್ವರ, ಮಲ್ಲಿಕಾರ್ಜುನ ದೇವರು, ಆಂಜನೇಯ ದೇವರು, ಮಲ್ಲಯ್ಯ ದೇವರು, ಲಕ್ಷ್ಮೀ ದೇವಿಗೆ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ನಂತರ ಕುಂಭ-ಕಳಸದೊಂದಿಗೆ ಗಂಗಾಪೂಜೆ, 101 ಕುಂಭ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ನಂತರ ಶರಣಬಸವೇಶ್ವರ ಮೂರ್ತಿಗೆ ಕುಂಭಾಭಿಷೇಕ ನೆರವೇರಿಸಲಾಯಿತು.

ಮಧ್ಯಾಹ್ನ ಭೂರಿಗಣಾರಾಧನೆ ಜರುಗಿತು. ಶರಣಬಸವೇಶ್ವರ ಭಾವಚಿತ್ರ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ಗುಂಡ ರಾಚೋಟೇಶ್ವರ ಸ್ವಾಮೀಜಿ, ಅಂಕಲಿಮಠದ ಫಕೀರೇಶ್ವರ ಸ್ವಾಮೀಜಿ, ತುರ್ವಿಹಾಳ ಅಮರಗುಂಡಯ್ಯ ಪುರವರಮಠ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಮಸ್ಕಿ ಬಿಜೆಪಿ ಮಂಡಲ ಅಧ್ಯಕ್ಷ ಶರಣಯ್ಯಸ್ವಾಮಿ ಸೊಪ್ಪಿಮಠ, ದೇವಸ್ಥಾನ ಸಮಿತಿ ಅಧ್ಯಕ್ಷ ಅಮರೇಗೌಡ ಪೊಪಾ, ಶರಣಯ್ಯಸ್ವಾಮಿ ಮಳಿಮಠ, ಶರಣಯ್ಯಸ್ವಾಮಿ ಹಿರೇಮಠ, ದಯಾನಂದಸ್ವಾಮಿ, ಶೇಖರಯ್ಯಸ್ವಾಮಿ, ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net