ಕಲ್ಲೂರು ಗ್ರಾಪಂಗೆ ಕನಕವ್ವ ಉಪಾಧ್ಯಕ್ಷೆ

31 Ylb 02
ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಪಂ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಕನಕವ್ವ ಬಂಗಾಳಿಗಿಡ ಅವರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ತಾಪಂ ಇಒ ಸಂತೋಷ ಪಾಟೀಲ್, ಗ್ರಾಪಂ ಅಧ್ಯಕ್ಷ ನಾಗಯ್ಯ ಗುರುಮಠ, ಸದಸ್ಯರಾದ ರಾಮಪ್ಪ ಪೂಜಾರ, ಕಲ್ಲಪ್ಪ ಕವಳಕೇರಿ, ಪಾರವ್ವ ರಾಂಪೂರ, ರೇಣುಕಾ ಇದ್ದರು.
Published on

ಯಲಬುರ್ಗಾ: ತಾಲೂಕಿನ ಕಲ್ಲೂರು ಗ್ರಾಪಂಗೆ ಕನಕವ್ವ ಕಲ್ಲಪ್ಪ ಬಂಗಾಳಿಗಿಡ ಬುಧವಾರ ಉಪಾಧ್ಯಕ್ಷೆಯಾಗಿ ಅವಿರೋಧ ಆಯ್ಕೆಯಾದರು.

ರಾಮಪ್ಪ ಪೂಜಾರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಕನಕವ್ವ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಆಯ್ಕೆಯನ್ನು ಅವಿರೋಧವೆಂದು ಚುನಾವಣಾಧಿಕಾರಿ ಬಸವರಾಜ ತೆನ್ನಳ್ಳಿ ಘೋಷಿಸಿದರು.

ಈ ವೇಳೆ ಒಟ್ಟು ಒಂಬತ್ತು ಸದಸ್ಯರ ಪೈಕಿ 6ಜನ ಹಾಜರಿದ್ದರು. ತಾಪಂ ಇಒ ಸಂತೋಷ್ ಪಾಟೀಲ್, ಗ್ರಾಪಂ ಕಾರ್ಯದರ್ಶಿ ಚನ್ನಪ್ಪರಡ್ಡಿ, ಸಮೀರ್ ಕುಮಾರ ಚುನಾವಣೆ ಪ್ರಕ್ರಿಯೆ ನಡೆಸಿದರು.

ಗ್ರಾಪಂ ಅಧ್ಯಕ್ಷ ನಾಗಯ್ಯ ಗುರುಮಠ, ಸದಸ್ಯರಾದ ರಾಮಪ್ಪ ಪೂಜಾರ, ಕಲ್ಲಪ್ಪ ಕವಳಕೇರಿ, ಪಾರವ್ವ ರಾಂಪೂರ, ರೇಣುಕಾ ಕವಳಕೇರಿ, ಪ್ರಮುಖರಾದ ವರದಯ್ಯ ಹಿರೇಮಠ, ಕಲ್ಲಪ್ಪ ಬಂಗಾಳಿಗಿಡದ, ಈರಪ್ಪ ಗುಡೊಸಲದ, ಯಲ್ಲಪ್ಪ ಅಗಸಿಮುಂದಿನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net