

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸೈದಾಪುರ ಗ್ರಾಮದ ಶ್ರೀ ಕಲ್ಲೇಶ್ವರ ದೇವರ ರಥೋತ್ಸವವು ಏ. 6ರಂದು ಸಂಜೆ 4 ಗಂಟೆಗೆ ಜರುಗಲಿದೆ. ಭಜನಾಮೇಳ, ಜಾಂಜ್ ಮೇಳ, ಡೊಳ್ಳಿನ ಮೇಳ ಹಾಗೂ ವಿವಿಧ ಜಾನಪದ ಮೇಳದೊಂದಿಗೆ ರಥೋತ್ಸವ ನೆರವೇರಲಿದೆ.
ರಾತ್ರಿ 9 ಗಂಟೆಗೆ ರಸಮಂಜರಿ ಕಾರ್ಯಕ್ರಮ, ಏ. 7ರಂದು ಬೆಳಗ್ಗೆ ಕಡಬಿನ ಕಾಳಗ ನರೆವೇರಲಿದೆ. ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.