

ನುಗ್ಗೇಹಳ್ಳಿ : ಹೇಮಾವತಿ ನದಿ ನೀರು ತುಂಬಿಸುವ ಕಲ್ಲೆ ಸೋಮನಹಳ್ಳಿ ಬೃಹತ್ ಏತ ನೀರಾವರಿ ಯೋಜನೆಗೆ 8 ದಿನಗಳಲ್ಲಿ ಚಾಲನೆ ನೀಡಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಸೋಮವಾರ ತಿಳಿಸಿದರು.
ಹೋಬಳಿಯ ಎಂ.ಸಿದ್ದರಹಟ್ಟಿ ಗ್ರಾಮದಲ್ಲಿ ಇತ್ತೀಚೆಗೆ 16 ಲಕ್ಷ ರೂ. ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟಿಸಿ ಅವರು ಮಾತನಾಡಿದರು.
ತಗಡೂರು, ಶಿವರ, ಕೆಂಬಾಳು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಗಡೂರು, ಲಕ್ಕರಸನಹಳ್ಳಿ, ರಂಗಾಪುರ, ಕಾಮನಾಯಕನಹಳ್ಳಿ, ಕಲ್ಲೇ ಸೋಮನಹಳ್ಳಿ, ಓಬಳಾಪುರ, ಕಾಳ ಮಾರನಹಳ್ಳಿ, ಎಂ.ಕೆ.ಹೊಸೂರ್, ಕಾಮನಹಳ್ಳಿ, ಸೋಮನಹಳ್ಳಿ, ಹೊಂಗೆಹಳ್ಳಿ, ಮಾದಗುಡ್ಡನಹಳ್ಳಿ, ಮುತ್ತಿನ ಕಟ್ಟೆ, ಕೆಂಬಾಳು, ಬಳಗಟ್ಟ, ಬಿದರೆ, ಕೆರೆಗಳಿಗೆ ನೀರು ಹರಿಸುವುದರಿಂದ ಈ ಭಾಗದ ರೈತರ ಭೂಮಿಯಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಎಲ್ಲ ವರ್ಗದ ಜನರಿಗೆ ಸಮಪಾಲು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ವಡ್ಡರಹಟ್ಟಿ ಅಂಬೇಡ್ಕರ್ ಶಾಲೆ ಕಟ್ಟಡ ಕಾಮಗಾರಿ ಜೀರ್ಣೋದ್ಧಾರ ಪೂರ್ಣಗೊಳಿಸಿ ಭುವನಹಳ್ಳಿಯಿಂದ ವಡ್ಡರಟ್ಟಿ, ಸಿದ್ದರಟ್ಟಿ, ಒಂಟಿ ಮಾವಿನಹಳ್ಳಿಗೆ ಡಾಂಬರ್ ರಸ್ತೆ ಮಾಡಿಸುವ ಭರವಸೆ ನೀಡಿದರು.
ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಚಂದ್ರಮ್ಮ ಶಂಕರ್, ಸುಕನ್ಯಾ ಕುಮಾರ್, ಮುಖಂಡರುಗಳಾದ ಬೆಳಗಳ್ಳಿ ಕೆ. ಪುಟ್ಟಸ್ವಾಮಿ, ಓಬಳಾಪುರ ಎನ್.ಬಸವರಾಜ್, ಕಲ್ಲೇ ಸೋಮನಹಳ್ಳಿ ತಮ್ಮಯ್ಯಣ್ಣ, ಎಲ್.ಕೆ.ಇಂದ್ರೇಶ್, ಅಣತಿ ನಾಗೇಶ್, ಎಸ್.ಆರ್. ಮಂಜುನಾಥ್, ಶಿವಕುಮಾರ್, ಪ್ರಸಾದ್, ಹೇಮರಾಜ್, ನಾಗರಾಜು ಹೊನ್ನೂರಯ್ಯ, ಇಟ್ಟಿಗೆ ನಾಗರಾಜ್, ವೆಂಕಟಪ್ಪ, ಗ್ರಾಮದ ಮುಖಂಡರುಗಳು ಇತರರು ಹಾಜರಿದ್ದರು.