

ಲಿಂಗದಹಳ್ಳಿ: ತಿಗಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲತ್ತಿಗಿರಿಗೆ ಭೇಟಿ ನೀಡುವ ಪ್ರಾವಸಿಗರ ವಾಹನಗಳ ಪ್ರವೇಶ ಶುಲ್ಕ ವಸೂಲಾತಿ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಿತು. ಈ ಹರಾಜು ಪ್ರಕ್ರಿಯೆಯಲ್ಲಿ ವರ್ತೆಗುಂಡಿ, ನಂದಿಬಟ್ಟಲು, ಕಲ್ಲತ್ತಿಪುರ, ತಣಿಗೆಬೈಲು, ಲಿಂಗದಹಳ್ಳಿ ಸೇರಿದಂತೆ ಈ ಭಾಗದ 12 ಬಿಡ್‌ದಾರರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಕಲ್ಲತ್ತಿಪುರ ಗ್ರಾಮದ ಯಶವಂತ ಎಂಬುವವರು 13.21 ಲಕ್ಷ ರೂ.ಗೆ ಗರಿಷ್ಟ ಬಿಡ್ ಕೂಗುವ ಮೂಲಕ 2025 ಫೆಬ್ರವರಿ 25 ರಿಂದ 2026 ಫೆಬ್ರವರಿ 26 ರವರೆಗೆ 1 ವರ್ಷದ ಅವಧಿಯವರಗೆ ವಾಹನ ಪ್ರವೇಶ ಶುಲ್ಕ ವಸೂಲಾತಿ ಮಾಡಿಕೊಳ್ಳಬಹುದಾಗಿದೆ. ಸರ್ಕಾರಿ ವಾಹನಗಳು, ಸರ್ಕಾರಿ ಅಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳನ್ನು ಹೊರತುಪಡಿಸಿ ಇನ್ನಿತರ ಪ್ರವಾಸಿ ವಾಹನಗಳಿಗೆ ಗ್ರಾಪಂನವರು ನಿಗದಿಪಡಿಸಿರುವ ದರದಂತೆ ವಾಹನ ಪ್ರವೇಶ ಶುಲ್ಕ ಪ್ರವೇಶಾತಿ ಮಾಡಿಕೊಳ್ಳಬಹುದಾಗಿದೆ ಎಂದು ಪಿಡಿಒ ಟಿ.ಶಿವಮೂರ್ತಿ ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷ ಆರ್.ಮುರುಗ, ಸದಸ್ಯರಾದ ಎನ್.ಜಿ ರಮೇಶ್, ಲಕ್ಷ್ಮೀಬಾಯಿ, ಮಂಜುಳಾ, ನೀಲಮ್ಮ, ಮಂಜುಳ, ಗ್ರಾಪಂ ಕಾರ್ಯದರ್ಶಿ ಗಂಗಣ್ಣ, ಸಿಬ್ಬಂದಿಗಳಾದ ಆರ್.ಸತೀಶ್, ಆರ್.ಗಗನ್ ಇದ್ದರು.