ಶಿಸ್ತು ರೂಢಿಸಿಕೊಂಡಾಗ ಸಾಧನೆ : ಅಬ್ಬಾಸ್ ಆಲಿ ಬಿ.ಎಂ. ಅಭಿಪ್ರಾಯ

01
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಕ್ರೀಡಾಕೂಟಗಳಲ್ಲಿ ಶಿಸ್ತು ಮುಖ್ಯವಾಗಿದ್ದು, ಶಿಸ್ತನ್ನು ರೂಢಿಸಿಕೊಂಡಾತ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಲು ಸಾಧ್ಯ ಎಂದು ತಾಪಂ ಮಾಜಿ ಉಪಾಧ್ಯಕ್ಷ ಅಬ್ಬಾಸ್ ಆಲಿ ಬಿ.ಎಂ. ಹೇಳಿದರು.

ದ.ಕ ಜಿಪಂ ಹಿರಿಯ ಪ್ರಾಥಮಿಕ ಶಾಲೆ ಬೋಳಂತೂರು ಹಾಗೂ ದಾರುಲ್ ಅಶ್ ಅರಿಯ್ಯ ಆಂಗ್ಲ ಮಾಧ್ಯಮ ಶಾಲೆ ಸುರಿಬೈಲು ಸಹಯೋಗದಲ್ಲಿ ಗುರುವಾರ ಬೋಳಂತೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲ್ಲಡ್ಕ ವಲಯಮಟ್ಟದ 14 ಹಾಗೂ 17 ವರ್ಷ ವಯೋಮಿತಿ ಬಾಲಕ- ಬಾಲಕಿಯರ ಕಬಡ್ಡಿ ಟೂರ್ನಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಬೋಳಂತೂರು ಗ್ರಾಪಂ ಅಧ್ಯಕ್ಷೆ ಶಾಲಿನಿ ಕಾರ್ಯಕ್ರಮ ಉದ್ಘಾಟಿಸಿದರು. ಬೋಳಂತೂರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಶೀರ್ ನಾರೆಂಕೋಡಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್ ಪಂದ್ಯಾಟಕ್ಕೆ ಚಾಲನೆ ನೀಡಿದರು.

ಬೋಳಂತೂರು ಗ್ರಾಪಂ ಉಪಾಧ್ಯಕ್ಷ ಯಾಕೂಬ್ ಡಿ., ಸದಸ್ಯರಾದ ಚಂದ್ರಶೇಖರ ರೈ, ಸಂಧ್ಯಾ, ಅನ್ಸರ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಂಕರ್, ನಿವೃತ್ತ ಶಿಕ್ಷಕ ಕೂಸಪ್ಪ, ಸರ್ಕಾರಿ ನೌಕರರ ಸಂಘ ಕಾರ್ಯದರ್ಶಿ ಸಂತೋಷ್, ಗ್ರೇಡ್ 2 ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಅಧ್ಯಕ್ಷ ಇಂದು ಶೇಖರ್, ಬೋಳಂತೂರು ಗ್ರಾಪಂ ಕಾರ್ಯದರ್ಶಿ ಅಶ್ರಫ್, ಶಾಲಾಭಿವೃದ್ಧಿ ಸಮಿತಿ ಸದಸ್ಯ ಹಮೀದ್ ಟೈಲರ್, ಕಲ್ಲಡ್ಕ ಕ್ಲಸ್ಟರ್ ಸಿಆರ್‌ಪಿ ಜ್ಯೋತಿ, ಕ್ರೀಡಾಕೂಟದ ನೋಡಲ್ ಅಧಿಕಾರಿಗಳಾದ ಜಗದೀಶ್ ಕೆ., ಪ್ರಕಾಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾಧ್ಯಕ್ಷ ಶಿವ ಪ್ರಸಾದ ಶೆಟ್ಟಿ, ಅಕ್ಷಯ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಝಕಾರಿಯಾ ನಾರ್ಶ, ಸಂಚಾಲಕ ಕರಿಂ ಕದ್ಕಾರ್, ಕಾರ್ಯದರ್ಶಿ ಲತೀಫ್ ಪರ್ತಿಪ್ಪಾಡಿ, ಅಂಬಿಕಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸಚಿನ್ ಕುಮಾರ್, ಮಾಜಿದ್ ಉಳ್ಳಾಲ ಭೀಮ್ ಸಂಜೀವಿನಿ ಅಧ್ಯಕ್ಷ ಸದಾನಂದ, ಗೌರವಾಧ್ಯಕ್ಷ ಶ್ರೀನಿವಾಸ ಬಂಗಾರ ಕೋಡಿ, ಹಳೇ ವಿದ್ಯಾರ್ಥಿ ಸಂಘದ ಗೌರವ ಸಂಚಾಲಕ ಜಯರಾಜ್ ಬಿ., ಅಧ್ಯಕ್ಷ ಮ್ಯಾಮಕುಂಞ ಮೊದಲಾದವರು ಉಪಸ್ಥಿತರಿದ್ದರು. ಶಫೀಕ್ ಡಿ.ಬಿ. ಸ್ವಾಗತಿಸಿದರು. ಗೀತಾ ಎಸ್. ವಂದಿಸಿದರು. ಹರೀಶ್ ಕಾರ್ಯಕ್ರಮ ನಿರೂಪಿಸಿದರು.

ತಾಲೂಕುಮಟ್ಟದ ಸ್ಪರ್ಧೆಗೆ ಆಯ್ಕೆ

ಕಬಡ್ಡಿ ಪಂದ್ಯಾಟದ 17 ವರ್ಷ ವಯೋಮಿತಿ ಬಾಲಕರ ವಿಭಾಗದಲ್ಲಿ ಬಾಲವಿಕಾಸ ಆಂಗ್ಲ ಮಾಧ್ಯಮ ಮಾಣಿ ಪ್ರಥಮ, ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆ ಕಲ್ಲಡ್ಕ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಪ್ರಥಮ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ದ್ವಿತೀಯ ಸ್ಥಾನ ಗಳಿಸಿತು. 14 ವರ್ಷ ವಯೋಮಿತಿ ಬಾಲಕರ ವಿಭಾಗದಲ್ಲಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ಪ್ರಥಮ, ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಪ್ರಥಮ, ಶ್ರೀರಾಮಚಂದ್ರ ಪ್ರೌಢಶಾಲೆ ಪೆರ್ನೆ ದ್ವೀತಿಯ ಸ್ಥಾನ ಪಡೆದು ತಾಲೂಕುಮಟ್ಟದ ಸ್ಪರ್ಧೆಗೆ ಆಯ್ಕೆಯಾದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net