ಕಲ್ಲಡ್ಕ ಪ್ರಭಾಕರ್ ಭಟ್ ಭಾಷಣಕ್ಕೆ ಅವಕಾಶ ನೀಡದಿರಿ

2LNG01
Published on

ಲಿಂಗಸುಗೂರು: ಮುಸ್ಲಿಂ ಮಹಿಳೆಯರ ಕುರಿತು ಅವಹೇಳನ ಮಾಡಿರುವ ಆರ್‌ಎಸ್‌ಎಸ್ ಪ್ರಮುಖ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಎಸಿ ಅವಿನಾಶ ಶಿಂಧೆಗೆ ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕ ಮಹಿಳಾ ಘಟಕದ ನೇತೃತ್ವದಲ್ಲಿ ಮಂಗಳವಾರ ಮನವಿ ಸಲ್ಲಿಸಲಾಯಿತು.

ಮಂಡ್ಯದಲ್ಲಿ ಡಿ.24 ರಂದು ಹನುಮ ಮಾಲಾಧಾರಿಗಳ ಸಂಕೀರ್ಣ ಯಾತ್ರೆಯಲ್ಲಿ ಭಾಗವಹಿಸಿ ಹೆಣ್ಣು ಭ್ರೂಣ ಹತ್ಯೆ ಮತ್ತು ಶೋಷಣೆ ಬಗ್ಗೆ ಮಾತನಾಡದೆ, ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಹಾಕುವ ಸ್ವಾತಂತ್ರ್ಯ ಸಿಕ್ಕರೆ ಶಾಲೆಗೆ ಬರುತ್ತೇವೆ ಎನ್ನುತ್ತಾರೆ. ಅವರು ಹೇಗೆ ಶಾಲೆಗೆ ಬರುತ್ತಾರೆ ಎನ್ನುವ ರೀತಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕನ್ನು ಅಪಮಾನಿಸಿದ್ದಾರೆ ಎಂದು ದೂರಿದರು.

ಮುಸ್ಲಿಮರ ಬಗ್ಗೆ ಕೀಳು ಭಾಷೆ ಬಳಸಿ ಕೋಮು ಪ್ರಚೋದನೆ ನೀಡುವ ಭಾಷಣದಿಂದ ಶಾಂತಿ ಕದಡಿದಂತಾಗಿದೆ. ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಸಾರ್ವಜನಿಕ ವೇದಿಕೆಗಳಲ್ಲಿ ಭಾಷಣ ಮಾಡಲು ಅವಕಾಶ ನೀಡಬಾರದು ಎಂದು ಆಗ್ರಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net