ಪುತ್ತೂರು: ಸನಾತನ ಧರ್ಮವನ್ನು ದೂಷಣೆ ಮಾಡಿದರೆ, ಅಲ್ಪಸಂಖ್ಯಾತರ ಮತ ಸಿಗುತ್ತದೆ. ವೋಟ್ ಬ್ಯಾಂಕ್ ಮೂಲಕ ಅಧಿಕಾರ ಸ್ಥಾಪನೆ ಮಾಡುತ್ತೇನೆ ಎಂಬ ಹುಚ್ಚು ಪ್ರಾರಂಭವಾಗಿದೆ. ಪರಮೇಶ್ವರ್ ಯಾಕೆ ಇಸ್ಮಾಲಿ ಅಂತ ಇಟ್ಟುಕೊಂಡಿಲ್ಲ, ಸ್ಟಾಲಿನ್ ಅಂತ ಇಟ್ಟುಕೊಳ್ಳಬಹುದಿತ್ತಲ್ಲಾ. ದೇವಸ್ಥಾನಕ್ಕೆ ಹೋಗಿ ಹೊರಗಡೆ ಬಂದಾಗ ಧರ್ಮ ಯಾವಾಗ ಹುಟ್ಟಿತು ಅಂತ ಪ್ರಶ್ನಿಸಲಾಗುತ್ತಿದೆ. ಧರ್ಮ ಹುಟ್ಟಿದ್ದು ಯಾವಾಗ ಎಂದು ಯಾರಿಗೂ ಗೊತ್ತಿಲ್ಲ ಮತ್ತು ನಮ್ಮದಕ್ಕೆ ನಾಶವೂ ಇಲ್ಲ ಎಂದು ಹಿಂದೂ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಕ್ರಿಶ್ಚನ್ ರದ್ದು ೨೦೨೩ ವರ್ಷದ ಹಿಂದೆ, ಮುಸಲ್ಮಾರದ್ದು, ೧೬೭೦ ಹಿಂದೆ ಹುಟ್ಟಿದೆ. ನಮ್ಮಲ್ಲಿ ಒಂದೇ ದೇವರು, ಒಂದೇ ಪುಸ್ತಕ ಎಂದು ಇಲ್ಲ. ಒಂದೇ ರೀತಿಯಲ್ಲಿ ಪೂಜೆ ಮಾಡಬೇಕೆಂದು ಹೇಳಿಲ್ಲ. ಒಂದೇ ದಿಕ್ಕಿಗೆ, ಒಂದೇ ಸಮಯದಲ್ಲಿ ಪೂಜೆ ಮಾಡಬೇಕೆಂದು ಹೇಳಿಲ್ಲ. ವೈಯಕ್ತಿಕ ಸ್ವಾತಂತ್ರ್ಯವನ್ನು ನೀಡಿ ಎಲ್ಲರಲ್ಲಿಯೂ ದೈವತ್ವವನ್ನು ನಿರ್ಮಾಣ ಮಾಡುವ ಪವಿತ್ರ ಕಾರ್ಯ ಸನಾತನ ಧರ್ಮ ಮಾಡುತ್ತಿದೆ. ಸನಾತನ ನಿತ್ಯ ನೂತನವಾಗಿದ್ದು, ಮೂಡನಂಬಿಕೆ ಬಂದರೆ ಅದನ್ನು ಸರಿ ಮಾಡಲು ವ್ಯವಸ್ಥೆಯಿದೆ. ೨ಸಾವಿರ ವರ್ಷದ ಹಿಂದೆ ಇದ್ದ ವಿಚಾರ ಇವತ್ತು ಸರಿಹೋಗುವುದಿಲ್ಲ. ಮಹಾ ಪುರುಷರು ಕಾಲ ಕಾಲಕ್ಕೆ ಇದನ್ನು ಸರಿಪಡಿಸುವ ಕಾರ್ಯ ಮಾಡುತ್ತಾ ಬಂದಿದ್ದಾರೆ ಎಂದು ತಿಳಿಸಿದರು.
ನಮ್ಮ ಧರ್ಮ ಮತ್ತು ವಿಜ್ಞಾನ ಜತೆಯಾಗಿ ಸಾಗುತ್ತಿದ್ದು, ಬೇರಾವುದೂ ಒಟ್ಟುಗೆ ಹೋಗುವುದಿಲ್ಲ. ಧರ್ಮ ಬೇರೆಯೇ ಹೇಳುತ್ತದೆ, ಅವರ ನಂಬಿಕೆ ಬೇರೆಯಾಗಿದೆ. ಜಗತ್ತು ನಿರೀಕ್ಷೆ ಮಾಡುವ ಮಟ್ಟಕ್ಕೆ ಹೋಗುವ ಕಾರ್ಯವನ್ನು ಮಾಡಲಾಗುವುದು. ಹಿಂದುಗಳಾಗಿ ಹುಟ್ಟಿದವರು ಅಂತ ಕೆಲಸವನ್ನು ಅರ್ಥೈಸಿಕೊಳ್ಳಬೇಕು. ರಾಜಕೀಯಕ್ಕಾಗಿ ಕೆಟ್ಟ ಶಬ್ದಗಳನ್ನು ಬಳಸಿ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿಲ್ಲ. ಬೇರೆಯವರನ್ನು ದಾರಿ ತಪ್ಪಿಸುವವರು ದೇವಾಲಯಕ್ಕೆ ಹೋಗುತ್ತಾರೆ. ಮೋಸ ನಡೆಯುತ್ತಿದ್ದು, ಎಚ್ಚರಿಕೆಯಿಂದ ಮಾತನಾಡಬೇಕು ಎಂದು ತಿಳಿಸಿದರು.