ಕಳ್ಳಭಟ್ಟಿ ತಯಾರಕರ ಮೇಲೆ ದಾಳಿ

kallabhatti
Published on

ಮಡಿಕೇರಿ:

ಮಡಿಕೇರಿ ತಾಲೂಕು ಕರಿಕೆ ಗ್ರಾಮದ ಕರಿಬಳಪು ಎಂಬಲ್ಲಿ ಶುಕ್ರವಾರ 3 ಕಡೆ ಅಬಕಾರಿ ದಾಳಿ ನಡೆದಿದೆ. ಈ ಸಂದರ್ಭ ರಾರು ಎಂಬವರ ಮನೆಯಲ್ಲಿ ಸುಮಾರು 1 ಲೀಟರ್ ಕಳ್ಳಭಟ್ಟಿ, 25 ಲೀಟರ್ ಪುಳಗಂಜಿ ಹಾಗೂ ಭಟ್ಟಿ ಇಳಿಸುವ ಪರಿಕರಗಳು, ರಮೇಶ ಎಂಬವರ ಮನೆಯಲ್ಲಿ ಸುಮಾರು 0.5 ಲೀಟರ್ ಕಳ್ಳಭಟ್ಟಿ, 50 ಲೀಟರ್ ಪುಳಗಂಜಿ ಹಾಗೂ ಭಟ್ಟಿಇಳಿಸುವ ಪರಿಕರಗಳು, ಕಾರ್ಯಪ್ಪ ಎಂಬವರ ಮನೆಯಲ್ಲಿ ಸುಮಾರು 4 ಲೀಟರ್ ಕಳ್ಳಭಟ್ಟಿ, 25 ಲೀಟರ್ ಪುಳಗಂಜಿ ಹಾಗೂ ಭಟ್ಟಿ ಇಳಿಸುವ ಪರಿಕರಗಳನ್ನು ಇಲಾಖಾ ವಶಕ್ಕೆ ಪಡೆದುಕೊಂಡು ಆರೋಪಿಗಳ ಪ್ರಕರಣಗಳನ್ನು ದಾಖಲಿಸಲಾಗಿದೆ.

ದಾಳಿಯಲ್ಲಿ ಅಬಕಾರಿ ನಿರೀಕ್ಷಕಿ ವಿ. ಸ್ವರ್ಣವಲ್ಲಿ, ಅಬಕಾರಿ ಉಪ ನಿರೀಕ್ಷಕ ಬಿ.ಎಸ್. ಬಾಲಕೃಷ್ಣ, ಮುಖ್ಯ ಕಾನ್ಸ್ಟೇಬಲ್ ಕೆ.ಬಿ. ರಾಜೇಂದ್ರ, ಕಾನ್ಸ್ಟೇಬಲ್‌ಗಳಾದ ಎಚ್.ಎ. ರಾಜು, ಡಿ.ಎಸ್. ಮೊಹನ್ ಕುಮಾರ್ ಹಾಗೂ ವಾಹನ ಚಾಲಕ ವೈ. ನಿತಿನ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net