ಕಳ್ಳಬಟ್ಟಿ ಅಡ್ಡೆ ಮೇಲೆ ಪೊಲೀಸರ ದಾಳಿ- ಮಾರಲದಿನ್ನಿ ತಾಂಡಾದಲ್ಲಿ ಸಂಗ್ರಹಿಸಿದ್ದ ಕೊಳೆ ನಾಶ

290420 Matala Dinni Tanda Kallabatti Raid
Published on

ಮಸ್ಕಿ: ತಾಲೂಕಿನ ಮಾರಲದಿನ್ನಿ ತಾಂಡಾದಲ್ಲಿ ಕಳ್ಳಬಟ್ಟಿ ತಯಾರಿಸುತ್ತಿದ್ದ ಅಡ್ಡೆ ಮೇಲೆ ಬುಧವಾರ ಬೆಳಗ್ಗೆ ಪೊಲೀಸರ ತಂಡ ದಾಳಿ ಮಾಡಿ ಸಂಗ್ರಹಿಸಿದ್ದ ಕೊಳೆಯನ್ನು ನಾಶಗೊಳಿಸಿತು. ಸಿಪಿಐ ದೀಪಕ್ ಬೂಸರಡ್ಡಿ, ಪಿಎಸ್‌ಐ ಸಣ್ಣ ವೀರೇಶ ನೇತೃತ್ವದ 25 ಸಿಬ್ಬಂದಿ ತಂಡ ದಾಳಿ ನಡೆಸಿ ಸುಮಾರು 2000 ಲೀಟರ್ ಕಳ್ಳಬಟ್ಟಿ ತಯಾರಿಕೆಗೆ ಸಂಗ್ರಹಿಸಿದ್ದ ಕೊಳೆ ಮತ್ತು ಕಳ್ಳಬಟ್ಟಿ ಸಾರಾಯಿ ವಶಕ್ಕೆ ಪಡೆದು ನಾಶಗೊಳಿಸಲಾಯಿತು.

ಬಾರ್‌ಶಾಪ್‌ಗಳನ್ನು ಬಂದ್ ಮಾಡಿದ್ದರಿಂದ ಕಳ್ಳಬಟ್ಟಿ ಸರಾಯಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ತಾಲೂಕಿನ ಬಹುತೇಕ ತಾಂಡಾಗಳಲ್ಲಿ ಕಳ್ಳಬಟ್ಟಿ ತಯಾರಿಕೆ ಜೋರಾಗಿದೆ ನಡೆದಿದೆ. ಆದರೆ, ಕಳ್ಳಬಟ್ಟಿ ಅಕ್ರಮಕ್ಕೆ ಕಡಿವಾಣ ಹಾಕಬೇಕಾದ ಅಬಕಾರಿ ಇಲಾಖೆ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net