ಕಾಳಿಂಗ ಸರ್ಪ ರಕ್ಷಣೆ

ಚಿತ್ರ 11ಎಸ್ ಡಿ ಪಿ 01
Published on


ಕೊಡಗು : ಸಿದ್ದಾಪುರದ ಚೇಯ್ಯಂಡಾಣೆ ಪ್ರವೀಣ್ ಕಾಳಯ್ಯ ಅವರ ಮನೆಯ ಛಾವಣಿಯಲ್ಲಿ ಸೇರಿಕೊಂಡಿದ್ದ ಅಂದಾಜು 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ರಕ್ಷಕ ಬೊಪ್ಪಂಡ ರೋಶನ್ ರಕ್ಷಿಸಿದ್ದಾರೆ. ಕಾಳಿಂಗ ಸರ್ಪವನ್ನು ಪೆರುಂಬಾಡಿ ಅರಣ್ಯಕ್ಕೆ ಬಿಡಲಾಗಿದೆ ಎಂದು ರೋಶನ್ ತಿಳಿಸಿದರು.
ನೀರು, ಆಹಾರ ಅರಸಿ ಪ್ರಾಣಿಗಳು ಮನೆಯ ಸಮೀಪವೇ ಬರುತ್ತಿದ್ದು, ಗ್ರಾಮಸ್ಥರು ಎಚ್ಚರ ವಹಿಸಬೇಕು. ಪ್ರಾಣಿ, ಪಕ್ಷಿಗಳಿಗೆ ನೀರಿನ ದಾಹ ನೀಗಿಸಲು ಮನೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ನೀರು ಸಂಗ್ರಹಿಸಿ ಇಡಬೇಕೆಂದು ಮನವಿ ಮಾಡಿದರು. ಹಾವುಗಳು ಕಂಡು ಬಂದಲ್ಲಿ ಮುನ್ನೆಚ್ಚರಿಕೆ ವಹಿಸುವುದರ ಮೂಲಕ 7022373921 ಕರೆ ಮಾಡುವಂತೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net