

ಮಂಗಳೂರು : ನಗರದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಅ.3ರಿಂದ 12ರವರೆಗೆ ನವರಾತ್ರಿ ಉತ್ಸವ ನಡೆಯಲಿದೆ.
ಅ.7ರಂದು ಲಲಿತಾ ಪಂಚಮಿ ಅಂಗವಾಗಿ ಶ್ರೀ ಚಂಡಿಕಾ ಹೋಮ, ಬೆಳಗ್ಗೆ 11.30ಕ್ಕೆ ಪೂರ್ಣಾಹುತಿ, ಅ.9ರಂದು ಮೂಲ ನಕ್ಷತ್ರ ಪೂಜೆ, ಅ.12ರಂದು ಸಾಮೂಹಿಕ ಆಯುಧ ಪೂಜೆ , ಅ.13ರಂದು ವಿಜಯ ದಶಮಿಯಂದು ಬೆಳಗ್ಗೆ 7.30ಕ್ಕೆ ಕದಿರು ತರುವುದು ನೆರವೇರಲಿದೆ ಎಂದು ಕ್ಷೇತ್ರದ ಆಡಳಿತಾಧಿಕಾರಿ ಕೆ. ಉಮೇಶ್ ಆಚಾರ್ಯ ಪಾಂಡೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.