ಸಮಾಜದ ಹಿತ ಬಯಸುವ ಮನಸ್ಸು ನಮ್ಮದಾಗಲಿ -ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ

mng-10apri-kalikamba
Published on




ಮಂಗಳೂರು : ನಮ್ಮೆಲ್ಲರ ಮನಸ್ಸು ಸದಾ ಸಮಾಜದ ಹಿತವನ್ನು ಬಯಸಬೇಕೇ ಹೊರತು, ಸಂಘರ್ಷದ ವಾತಾವರಣವನ್ನು ಸೃಷ್ಟಿಸುವಂತಾಗಬಾರದು. ಕೆಟ್ಟ ಚಿಂತನೆಗಳು ಯಾವತ್ತೂ ನಮ್ಮನ್ನೇ ಅಧಃ ಪತನದತ್ತ ಕೊಂಡೊಯ್ಯುತ್ತದೆ ಎಂದು ಆನೆಗುಂದಿ ಮಠದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಆರಂಭವಾದ ಯುಗಾದಿ ಮಹೋತ್ಸವದ ಅಂಗವಾಗಿ
ಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡಿದ ಅವರು ‘ಐಶ್ವರ್ಯ, ಅಂತಸ್ತು, ಅಧಿಕಾರ ಎಲ್ಲವೂ ಕ್ಷಣಿಕ. ಸನ್ಮಾರ್ಗವನ್ನು ಅನುಸರಿಸಿ ಭಗವಂತನ ಸೇವೆ ಮಾಡುವುದು ಹೆಚ್ಚು ಶ್ರೇಯಸ್ಕರ ಎಂದು
ಕ್ಷೇತ್ರದ ಪ್ರಧಾನ ತಂತ್ರಿಗಳಾದ ಬ್ರಹ್ಮಶ್ರೀ ಲಕ್ಷ್ಮೀಕಾಂತ ಶರ್ಮ ಅವರಿಂದ ನೂತನ ಸಂವತ್ಸರದ ಪಂಚಾಂಗ ಶ್ರವಣ ನಡೆಯಿತು. ಆಡಳಿತಾಧಿಕಾರಿ ಕೆ. ಉಮೇಶ್ ಆಚಾರ್ಯ ಪಾಂಡೇಶ್ವರ, ಆಡಳಿತ ಮಂಡಳಿಯ ಮಾಜಿ ಸದಸ್ಯರು , ಕಾಳಿಕಾಂಬಾ ಸೇವಾ ಸಮಿತಿ, ವಿಶ್ವಬ್ರಾಹ್ಮಣ ಮಹಿಳಾ ಸಮಿತಿ, ದ. ಕ. ಜಿಲ್ಲಾ ಚಿನ್ನದ ಕೆಲಸ ಗಾರರ ಸಂಘ, ವಿಶ್ವಕರ್ಮ ಯುವ ಮಿಲನದ ಸದಸ್ಯರು ಉಪಸ್ಥಿತರಿದ್ದರು. ರಾತ್ರಿ ಶ್ರೀ ಕಾಳಿಕಾಂಬೆ ಮತ್ತು ಸುಬ್ರಹ್ಮಣ್ಯ ದೇವರ ಬಲಿ ಉತ್ಸವ, ಪಲ್ಲಕ್ಕಿ ಉತ್ಸವ, ಬೀದಿ ಸವಾರಿ ನಡೆಯಿತು. ಸಾಂಸ್ಕೃತಿಕ
ಕಾರ್ಯಕ್ರಮದ ಅಂಗವಾಗಿ ಕಟೀಲ್ದಪ್ಪೆ ಉಳ್ಳಾಲ್ದಿ ತುಳು ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net