

ಮಂಗಳೂರು : ನಗರದ ಗುರುಮಠ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಏ.9ರಿಂದ 18ರವರೆಗೆ ಯುಗಾದಿ ಮಹೋತ್ಸವ ನಡೆಯಲಿದೆ.
ಏ.9ರಂದು ಬೆಳಗ್ಗೆ ಧ್ವಜಾರೋಹಣ, ಪಂಚಾಂಗ ಶ್ರವಣ ನೆರವೇರಲಿದ್ದು ಬಳಿಕ ಪ್ರತೀ ದಿನ ಶ್ರೀ ಕಾಳಿಕಾಂಬೆ ಮತ್ತು ಶ್ರೀ ಸುಬ್ರಹ್ಮಣ್ಯ ದೇವರ ಬಲಿ ಉತ್ಸವ, ಬೀದಿ ಸವಾರಿ ನಡೆಯಲಿದೆ. ಏ.13ರಂದು ಬೆಳಗ್ಗೆ ಗುರುಮಠದ ಗುರು ವೀರಭದ್ರ ದೇವರ ಪಂಚಮಿ ಉತ್ಸವ , ಬೀದಿ ಸವಾರಿ, 15ರಂದು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಅವರಿಂದ ಆಶೀರ್ವಚನ. ರಾತ್ರಿ ವಿಶೇಷ ಬಲಿ , ದೈವದ ಭೇಟಿ, ಚಂದ್ರ ಮಂಡಲೋತ್ಸವ,ಲಾಲ್ಕಿ , ಪಲ್ಲಕಿಯಲ್ಲಿ ಬೀದಿ ಸವಾರಿ, 16ರಂದು ಸಾಯಂಕಾಲ 4ಕ್ಕೆ ವೀರಭದ್ರ ದೇವರ ಲಾಲ್ಕಿ ಉತ್ಸವ, ಬೀದಿ ಸವಾರಿ, ರಾತ್ರಿ ಶಯನೋತ್ಸವ, 17ರಂದು ಬೆಳಗ್ಗೆ ಶ್ರೀ ದೇವಿಯ ಕವಾಟೋದ್ಘಾಟನೆ, ಸಾಯಂಕಾಲ 4ಕ್ಕೆ ಅವಭೃತ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ತೆರಳಿ, ಕದ್ರಿಯ ಕೆರೆಯಲ್ಲಿ ಜಳಕ ನಂತರ ಕ್ಷೇತ್ರಕ್ಕೆ ಆಗಮಿಸಿ ಧ್ವಜಾವರೋಹಣ ನೆರವೇರಲಿದೆ.
ಏ.18ರಂದು ಮಧ್ಯಾಹ್ನ ಚೂರ್ಣೋತ್ಸವ, ಶ್ರೀ ಸುಬ್ರಹ್ಮಣ್ಯ ದೇವರ ಪ್ರೀತ್ಯರ್ಥ ಬಟ್ಲು ಕಾಣಿಕೆ, 18ರಂದು ಅಮ್ಮನವರ ರಂಗ ಪೂಜೆ, 20ರಂದು ಸಾಯಂಕಾಲ 4ಕ್ಕೆ ವಿಶ್ವಕರ್ಮ ದೇವರ ರಂಗ ಪೂಜೆ . ವಿನಾಯಕ ದೇವರ ರಂಗ ಪೂಜೆ, ಕ್ಷೇತ್ರದ ಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮೋತ್ಸವ ಹಾಗೂ ಪಡುಪಣಂಬೂರು ನಾಲ್ಕುರು ಪಂಜುರ್ಲಿ ದೈವದ ನಿರ್ಗಮನ ನಡೆಯಲಿದೆ.
ಏ.9ರಿಂದ 17ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಕ್ಷೇತ್ರದ ಶ್ರೀ ಕಾಳಿಕಾಂಬಾ ರಂಗ ಮಂಟಪದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.