ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಉಪಾಕರ್ಮ

mng-29aug-kalikamaba
Published on



ಮಂಗಳೂರು : ನಗರದ ರಥಬೀದಿಯ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಉಪಾಕರ್ಮ (ನೂಲ ಹುಣ್ಣಿಮೆ ) ನೂತನ ಜನಿವಾರ ಧಾರಣೆ ಗುರು ಮಠದ ಪ್ರಧಾನ ಅರ್ಚಕ ಸುದರ್ಶನ ಪುರೋಹಿತ್ ಅವರ ಪ್ರಧಾನ ಆಚಾರ್ಯತ್ವದಲ್ಲಿ ಕ್ಷೇತ್ರದ ಪಟ್ಟೆ ಲಿಂಗಪ್ಪ ಆಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯಿತು. ಕ್ಷೇತ್ರದ ಆಡಳಿತ ಮೊಕ್ತೇಸರ ಕೆ. ಕೇಶವ ಆಚಾರ್ಯ, ಆಡಳಿತ ಮಂಡಳಿಯ ಸದಸ್ಯರು, ಕಾಳಿಕಾಂಬಾ ಸೇವಾ ಸಮಿತಿ, ದ. ಕ. ಜಿಲ್ಲಾ ಚಿನ್ನದ ಕೆಲಸ ಗಾರರ ಸಂಘ, ವಿಶ್ವಕರ್ಮ ಯುವ ವೇದಿಕೆ ಸಹಿತ ಅನೇಕ ವಿಶ್ವಬ್ರಾಹ್ಮಣರು ನೂತನ ಜನಿವಾರ ಧಾರಣೆ ಮಾಡಿದರು .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net