ಕಾಳಿಕಾದೇವಿ ದೇವಸ್ಥಾನದ ಜೀರ್ಣೋದ್ಧಾರವಾಗಲಿ

4SND-03
Published on

ಸಿಂಧನೂರು: ನಗರದ ಬಡಿಬೇಸ್ ಕಾಲನಿಯಲ್ಲಿರುವ ಅತ್ಯಂತ ಪುರಾತನವಾದ ಕಾಳಿಕಾದೇವಿ ದೇವಸ್ಥಾನ ಮರು ನಿರ್ಮಾಣ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಒತ್ತಾಯಿಸಿ ಶಾಸಕ ಹಂಪನಗೌಡ ಬಾದರ್ಲಿಗೆ ವಿಶ್ವಕರ್ಮ ಸಮಾಜ ಇತ್ತೀಚೆಗೆ ಮನವಿ ಸಲ್ಲಿಸಿತು.

ಕಾಳಿಕಾದೇವಿ ದೇವಸ್ಥಾನ ಶಿಥಿಲಾವಸ್ಥೆಯಲ್ಲಿದ್ದು, ಸ್ಥಳಾವಕಾಶವೂ ಕೂಡ ಕಡಿಮೆ ಇರುವುದರಿಂದ ದೇವಸ್ಥಾನ ಜೀರ್ಣೋದ್ಧಾರ ಮಾಡಬೇಕು. ವಿಶ್ವಕರ್ಮ ಸಮುದಾಯದ ಸಂಘಟನಾ ಚಟುವಟಿಕೆಗಳಿಗಾಗಿ ದೊಡ್ಡ ಸಮುದಾಯ ಭವನದ ಅವಶ್ಯವೂ ಇದ್ದು, ಅನುದಾನ ನೀಡುವಂತೆ ಕೋರಿದರು.

ಕಾಳಿಕಾದೇವಿ ದೇವಸ್ಥಾನದ ಜೀರ್ಣೋದ್ಧಾರ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಬಾದರ್ಲಿ ಭರವಸೆ ನೀಡಿದರು. ಪ್ರಮುಖರಾದ ಬಸವರಾಜ ಪತ್ತಾರ, ಚನ್ನಪ್ಪ ಕೆ.ಹೊಸಹಳ್ಳಿ, ರವಿ ಪತ್ತಾರ, ಮುತ್ತಣ್ಣ ಪತ್ತಾರ, ರಾಜು ಪತ್ತಾರ, ದೇವರಾಜ ಪತ್ತಾರ, ಚಿದಾನಂದಪ್ಪ ಸುಕಲಪೇಟೆ, ಮೌನೇಶ ಕೆ.ಹೊಸಹಳ್ಳಿ, ವಿನಯ ಕುರುಕುಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net