ಕಾಳಿಕಾದೇವಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿಪೂಜೆ

Kalikadevi Temple, Kalakeri, Shahapura, Vishwakarma Ekadandagi Math, MLA Rajugowda Patila, Alamela,
ಕಾಳಿಕಾದೇವಿ
Published on

ಕಲಕೇರಿ: ಗ್ರಾಮದ ವಿದ್ಯಾನಗರದ ಗುಮಶೆಟ್ಟಿ ಬಡಾವಣೆಯಲ್ಲಿ ನ.17 ರಂದು ಬೆಳಗ್ಗೆ 7 ಗಂಟೆಗೆ ಕಾಳಿಕಾದೇವಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ನೂತನ ದೇವಸ್ಥಾನ ನಿರ್ಮಾಣದ ಭೂಮಿಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ 7 ಗಂಟೆಗೆ ವಿಶ್ವಕರ್ಮ ಧ್ವಜಾರೋಹಣ, ಹೋಮ ನಡೆಯಲಿದೆ. ಶಹಾಪುರದ ವಿಶ್ವಕರ್ಮ ಏಕದಂಡಗಿಮಠ ಅಜೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ, ಕಾಳಹಸ್ತೇಂದ್ರ ಮಹಾಸ್ವಾಮಿಗಳು ನೇತೃತ್ವ ವಹಿಸುವರು.

ಬೆಳಗ್ಗೆ 11.30 ಗಂಟೆಗೆ ಕಲಕೇರಿ ಗ್ರಾಮದ ಗುರುವೀರಘಂಟೈ ಮಡಿವಾಳೇಶ್ವರ ದೇವಸ್ಥಾನದ ಆವರಣದಿಂದ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 12.30 ಗಂಟೆಗೆ ದೇವಸ್ಥಾನ ನಿರ್ಮಾಣಕ್ಕೆ ಭೂಮಿಪೂಜೆ ನಡೆಯಲಿದೆ. ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಭೂಮಿಪೂಜೆ ನೆರವೇರಿಸುವರು.

ಮಧ್ಯಾಹ್ನ 1.30 ಗಂಟೆಗೆ ಧರ್ಮಸಭೆ ನಡೆಯಲಿದೆ. ನಾಲತವಾಡದ ಪಂಪಾಪತಿ ಮಹಾಸ್ವಾಮಿಗಳು, ಆಲಮೇಲದ ರಾಮಚಂದ್ರ ಮಹಾಸ್ವಾಮಿಗಳು, ವಿಜಯಪುರದ ಮಹೇಂದ್ರ ಮಹಾಸ್ವಾಮಿಗಳು, ಜಾಲಹಳ್ಳಿಯ ಜಯಶಾಂತಲಿಂಗೇಶ್ವರ ಶಿವಾಚಾರ್ಯರು, ಭೋರಗಿಯ ತಪೋರತ್ನಂ ಮಹಾಲಿಂಗೇಶ್ವರ ಸ್ವಾಮೀಜಿ, ಕಲಕೇರಿ ಹಿರೇಮಠದ ಸಿದ್ದರಾಮ ಶಿವಾಚಾರ್ಯರು, ಗದ್ದುಗೆಮಠದ ಗುರುಮಡಿವಾಳೇಶ್ವರ ಶಿವಾಚಾರ್ಯರು ಹಾಗೂ ಗಣ್ಯರು ಭಾಗವಹಿಸುವರು. ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲಾಗುವುದು.

ಸಂಜೆ 4.30 ಗಂಟೆಗೆ ಕಲಾ ಸಿಂಚನ ಮೇಲೋಡಿಸ್ ತಂಡದವರಿಂದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net