ಕಾಳಿಕಾದೇವಿ ಪಲ್ಲಕ್ಕಿ ಉತ್ಸವ ಅದ್ದೂರಿ

Kalikadevi Palankki festival is grand
ಬಸವನಬಾಗೇವಾಡಿಯಲ್ಲಿ ಕಾಳಿಕಾದೇವಿ ಜಾತ್ರೆಯ ಅಂಗವಾಗಿ ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.
Published on

ಬಸವನಬಾಗೇವಾಡಿ: ಪಟ್ಟಣದ ವಿಜಯಪುರ ರಸ್ತೆಯ ಓಂ ನಗರದಲ್ಲಿನ ಕಾಳಿಕಾದೇವಿ ದೇವಸ್ಥಾನದ ಕಾಳಿಕಾದೇವಿ ಜಾತ್ರೆ ಶುಕ್ರವಾರ ಸಂಭ್ರಮದಿಂದ ಜರುಗಿತು.

ಬೆಳಗ್ಗೆ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ನಡೆಯಿತು. ಇಂಗಳೇಶ್ವರದ ಮಹೇಂದ್ರ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ಕಳಸಾರೋಹಣದ ನೆರವೇರಿದ ನಂತರ ಭಕ್ತರು ಕಾಯಿ, ಕರ್ಪೂರದೊಂದಿಗೆ ದೇವಸ್ಥಾನಕ್ಕೆ ಬಂದು ದೇವಿಯ ಮೂರ್ತಿಗೆ ಪೂಜೆ ಸಲ್ಲಿಸಿದರು.

ಪಲ್ಲಕ್ಕಿ ಉತ್ಸವ ಕಾಳಿಕಾದೇವಿ ಭಾವಚಿತ್ರದ ಮೆರವಣಿಗೆಯು ಪುರವಂತರ ಸೇವೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಸಂಜೆ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ ಜರುಗಿತು.

ಕಾಳಿಕಾದೇವಿ ದೇವಸ್ಥಾನ ಟ್ರಸ್ಟ ಅಧ್ಯಕ್ಷ ಕೆ.ಬಿ. ಕಡೆಮನಿ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಈರಣ್ಣ ಬಡಿಗೇರ, ಡಾ. ಕರುಣಾಕರ ಚೌಧರಿ, ರಾಜೇಂದ್ರ ಪತ್ತಾರ, ಸಂತೋಷ ಬಡಿಗೇರ, ಮಹೇಶ ಬಡಿಗೇರ, ಬಸವರಾಜ ಬಡಿಗೇರ, ರಾಮು ಬಡಿಗೇರ, ಮಂಜು ಬಡಿಗೇರ, ಚನ್ನಪ್ಪ ಪತ್ತಾರ, ವೀರಭದ್ರಪ್ಪ ಬಡಿಗೇರ, ಬಸವಂತಪ್ಪ ಪತ್ತಾರ, ಸಿದ್ದು ಬಡಿಗೇರಿ, ಎಂ.ಎಸ್. ಪತ್ತಾರ, ಸುರೇಶ ಪತ್ತಾರ, ನಾಗು ಪತ್ತಾರ, ಸುಭಾಸ ಪತ್ತಾರ, ದೇವೆಂದ್ರ ಬಡಿಗೇರ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net