

ತಲ್ಲೂರ: ಸಮೀಪದ ಜಾಲಿಕಟ್ಟಿ ಗ್ರಾಮದಲ್ಲಿ ಆ.8ರಂದು ಶ್ರೀ ಕಾಳಿಕಾದೇವಿ ದೇವಸ್ಥಾನ ಲೋಕಾರ್ಪಣೆ, ದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಜರುಗಲಿದೆ.ಬೆಳಗ್ಗೆ 5 ಗಂಟೆಗೆ ದೇವಿ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, 6 ಗಂಟೆಗೆ ಹೋಮ, ಪೂಜೆ, ರುದ್ರಾಭಿಷೇಕ ಹಾಗೂ ಕಳಸಾರೋಹಣ ನೆರವೇರಲಿದೆ. 10 ಗಂಟೆಗೆ ಧರ್ಮಸಭೆ ಜರುಗಲಿದೆ.
ಇಂಚಲ ಶಿವಯೋಗಿಶ್ವರ ಸಾಧು ಸಂಸ್ಥಾನ ಮಠದ ಶಿವಾನಂದ ಭಾರತಿ ಸ್ವಾಮೀಜಿ, ಕಟಕೋಳ ಗುರು ಗಡದೇಶ್ವರ ಹಿರೇಮಠದ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಕಿಲ್ಲಾ ತೊರಗಲ್ಲ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ, ಮಲ್ಲಾಪುರ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ, ಹೊಸಕೋಟಿ ಅಭಿನವ ರೇವಯ್ಯ ಸ್ವಾಮೀಜಿ, ಸೊಗಲ ಚಿದಾನಂದ ಅಜ್ಜನವರು ಸಾನ್ನಿಧ್ಯ ವಹಿಸುವರು.
ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸುವರು. ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯ ವಿರೂಪಾ ಮಾಮನಿ ಅಧ್ಯತೆ ವಹಿಸುವರು. ಉಪಾಧ್ಯ ವಿಕ್ರಮ ದೇಸಾಯಿ, ತಾಪಂ ಮಾಜಿ ಅಧ್ಯ ವಿನಯಕುಮಾರ ದೇಸಾಯಿ, ಸಂಗಯ್ಯ ಹಿರೇಮಠ, ನಿವೃತ್ತ ಉಪನ್ಯಾಸಕ ವೈ. .ಎ್.ನಾಯ್ಕರ, ನಿವೃತ್ತ ಯೋಧ ಮಲ್ಲಪ್ಪ ಬಡಿಗೇರ, ನಿವೃತ್ತ ಪಿಡಿಒ ವಿರೂಪಾಯ್ಯ ಪೂಜೇರ, ಮುಖಂಡರಾದ ತಿಪ್ಪನಾಯ್ಕ ಕಡಬಿ, ಶಿವಾನಂದ ನಾಯ್ಕರ, ಕಿಷ್ಟಪ್ಪ ನಾಯ್ಕರ ಪಾಲ್ಗೊಳ್ಳಲಿದ್ದಾರೆ ಎಂದು ಗ್ರಾಪಂ ಸದಸ್ಯ ಚನ್ನಯ್ಯ ಪೂಜೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.