ಕಾಳಿಕಾದೇವಿ ಲಕ್ಷ ದೀಪೋತ್ಸವ

17 nrlg 2
Published on

ನರೇಗಲ್ಲ: ಪಟ್ಟಣದ ಹೊಸಪೇಟಿ ಓಣಿಯ ಶ್ರೀ ಕಾಳಿಕಾದೇವಿ ದೇವಸ್ಥಾನದ ಲಕ್ಷ ದೀಪೋತ್ಸವ ಹಾಗೂ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮ ಫೆ. 19, 20 ಹಾಗೂ 21ರಂದು ನಡೆಯಲಿದೆ. 19ರಿಂದ ಪ್ರತಿದಿನ ಬೆಳಗ್ಗೆ ಶ್ರೀ ಕಾಳಿಕಾ ದೇವಿ ಹಾಗೂ ಮೌನೇಶ್ವರ ಮೂರ್ತಿಗೆ ಪಂಚಾಮೃತಾಭಿಷೇಕ, ಶೋಡೋಷೋಪಚಾರ ಪೂಜೆ, ಅಲಂಕಾರದೊಂದಿಗೆ ಮಹಾ ಮಂಗಳಾರತಿ ನೆರವೇರಲಿದೆ.

19ರಂದು ಸಂಜೆ 6 ಗಂಟೆಗೆ ಧರ್ಮ ಸಮಾರಂಭ ನಡೆಯಲಿದೆ. ಮುರನಾಳ ಮಳೇರಾಜೇಂದ್ರಸ್ವಾಮಿ ಮಠದ ಬ್ರಹ್ಮಶ್ರೀ ಜಗನ್ನಾಥ ಸ್ವಾಮೀಜಿಗಳು ಸಾನ್ನಿಧ್ಯ ವಹಿಸುವರು. ಗದಗ ವೀರೇಶ್ವರ ಪುಣ್ಯಾಶ್ರಮದ ಡಾ. ಕಲ್ಲಯ್ಯಜ್ಜನವರು, ಹಾಲಕೆರೆ ಸಂಸ್ಥಾನ ಮಠದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ, ನಿಡಗುಂದಿಕೊಪ್ಪದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಗಿಣಗೇರಾದ ಶ್ರೀ ಅಭಿನವ ಶ್ರೀಕಂಠ ಸ್ವಾಮೀಜಿ, ಇಳಕಲ್ಲದ ಶ್ರೀ ವಿಶ್ವನಾಥ ಸ್ವಾಮೀಜಿ, ಹೊಳೆಆಲೂರಿನ ಶ್ರೀ ಯಚ್ಚರೇಶ್ವರ ಸ್ವಾಮೀಜಿ, ಲೇಬಗೇರಿಯ ಶ್ರೀ ದಿವಾಕರ ಸ್ವಾಮೀಜಿ, ನರೇಗಲ್ಲದ ಹಜರತ್ ಮಂಜೂರ ಹುಸೇನ ಶಾವಲಿ ಸಮ್ಮುಖ ವಹಿಸುವರು. ಮಿಥುನ್ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಲಕ್ಷ ದೀಪೋತ್ಸವ ಸಮಿತಿ ಅಧ್ಯಕ್ಷ ಮೌನೇಶ ಹೊಸಮನಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಡಾ. ಗಜಾನನ ಕಾಳೆ, ಡಾ. ಬಿ.ಎನ್. ಪಾಟೀಲ, ಶಶಿಕಲಾ ಪಾಟೀಲ, ಪಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ ಪಾಲ್ಗೊಳ್ಳುವರು.

20ರಂದು ಸಂಜೆ ಶ್ರೀ ಕಾಳಿಕಾ ದೇವಿ ಸಮುದಾಯ ಭವನವನ್ನು ಸಂಸದ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಶಾಡಲಗೇರಿಯ ಶ್ರೀ ತೀರ್ಥೇಂದ್ರ ಸ್ವಾಮೀಜಿ, ನರಗುಂದದ ಡಾ. ಸಿದ್ಧವೀರ ಶಿವಾಚಾರ್ಯರು, ನವಲಗುಂದದ ಶ್ರೀ ವೀರೇಂದ್ರ ಸ್ವಾಮೀಜಿ, ಕೊಪ್ಪಳದ ಶ್ರೀ ಶಿರಸಪ್ಪಯ್ಯ ಸ್ವಾಮೀಜಿ, ಶಿರೋಳದ ಶ್ರೀ ಅಭಿನವ ಯಚ್ಚರ ಸ್ವಾಮೀಜಿ, ಸಿಂಧೂರಿನ ಶ್ರೀ ಮಹಾದೇವ ಶಾಸ್ತ್ರಿಗಳ ಸಾನ್ನಿಧ್ಯ ವಹಿಸುವರು. ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕ ಕಳಕಪ್ಪ ಬಂಡಿ ಉಪಸ್ಥಿತರಿರುವರು. ಧಾರವಾಡದ ಡಾ. ಕೆ.ಪಿ. ವೀರಣ್ಣ ಉಪನ್ಯಾಸ ನೀಡುವರು.

21ರಂದು ಸಂಜೆ 6ಕ್ಕೆ ಲಕ್ಷ ದೀಪೋತ್ಸವ ನಡೆಯಲಿದೆ. ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಸಿಂಧಗಿಯ ಶ್ರೀ ರಾಮಚಂದ್ರ ಸ್ವಾಮೀಜಿ, ಶಾಡಲಗಿಯ ಶ್ರೀ ಸೂರ್ಯನಾರಾಯಣ ಸ್ವಾಮೀಜಿ, ಲೇಬಗೇರಿಯ ಶ್ರೀ ನಾಗಮೂರ್ತೇಂದ್ರ ಸ್ವಾಮೀಜಿ, ಚಿಕ್ಕುಂಬಿಯ ಶ್ರೀ ಅಭಿನವ ನಾಗಲಿಂಗ ಸ್ವಾಮೀಜಿ, ಹಂಪಸಾಗರದ ಶ್ರೀ ಅಭಿನವ ಶಿವಲಿಂಗ ರುದ್ರಮುನಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅತಿಥಿಗಳಾಗಿ ಸಂಸದ ಪಿ.ಸಿ. ಗದ್ದಿಗೌಡರ, ಲೋಹಶಿಲ್ಪಿ ಹೊನ್ನಪ್ಪಾಚಾರ್ಯ, ಆರ್.ಡಿ. ಕಡ್ಲಿಕೊಪ್ಪ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net