

ರಾಮದುರ್ಗ: ಭಕ್ತಿಗೆ ಮತ್ತೊಂದು ಹೆಸರೇ ಶಬರಿಯಾಗಿದ್ದು, ಶ್ರೀರಾಮನ ದರ್ಶನಕ್ಕಾಗಿ ಕಾಯ್ದು ಕುಳಿತು, ಬೋರೆಹಣ್ಣು ತಿನ್ನಿಸಿದ ಪುಣ್ಯೇತ್ರವೇ ಶಬರಿಕ್ಷೇತ್ರವಾಗಿದೆ. ಜತೆಗೆ ರಾಮ ಸೀತಾಮಾತೆ ಇರುವಿಕೆ ರಹಸ್ಯ ಭೇದಿಸಿದ ಟನೆ ಇಲ್ಲೇ ನಡೆದಿರುವ ಬಗ್ಗೆ ಉಲ್ಲೇಖವಿದೆ ಎಂದು ಅಂತಾರಾಷ್ಟ್ರೀಯ ಧಾರ್ಮಿಕ ಗುರು, ಗುಜರಾತನ ರಾಮಕಥಾ ನಿರ್ದೇಶಕ ಮುರಾರಿ ಬಾಪೂಜಿ ಹೇಳಿದರು.
ತಾಲೂಕಿನ ಸುರೇಬಾನ ಹತ್ತಿರ ಶಬರಿ ೇತ್ರದಲ್ಲಿ ಮಂಗಳವಾರ ಶ್ರೀರಾಮ ಯಾತ್ರೆ ಪ್ರಯುಕ್ತ ಏರ್ಪಡಿಸಿದ್ದ ರಾಮ ಕಥಾ ಶ್ರವಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀರಾಮ ವನವಾಸದಲ್ಲಿದ್ದಾಗ ಶಬರಿ ಮಾರ್ಗದರ್ಶನದಿಂದ ಕಿಷ್ಕಿಂಧೆ ಪರ್ವತದಲ್ಲಿ ಹನುಮಾನ ದೇವರ ನೆರವಿನಿಂದ ಸೀತೆ ಇರುವಿಕೆ ಹಾಗೂ ಮಾರೀಚನ ರಹಸ್ಯ ಭೇದಿಸಿದ್ದು ಇಲ್ಲಿನ ಆಶ್ರಮದಿಂದ ಎಂದರು.
ಇಲ್ಲಿನ ಶಬರಿ ಆಶ್ರಮ ಶ್ರೀರಾಮ, ಪರಮೇಶ್ವರ ಹಾಗೂ ಶಬರಿ ಮಾತೆಯ ದೇವಸ್ಥಾನಗಳ ಸಂಗಮವಾಗಿರುವುದು ವಿಶೇಷವಾಗಿದೆ. ಇಲ್ಲಿ ಭಕ್ತಿ, ಆಧ್ಯಾತ್ಮಿಕ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ನಿಜವಾದ ಭಕ್ತಿ ಎಂದರೆ ಬದುಕುವ ಧೆರ್ಯ ಹಾಗೂ ಹದಯ ಸಿರಿವಂತಿಕೆ ಬೆಳೆಸಿಕೊಳ್ಳುವುದಾಗಿದೆ ಎಂದರು.
ಶ್ರೀರಾಮನ ನಾಮಾವಳಿ, ರಾಮನಾಮ ಜಪ ಹಾಗೂ ಆರತಿ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಆಗಮಿಸಿದ್ದರು.
ಕ್ಷೇತ್ರ "ವೀಕ್ಷಣೆ": ಧಾರ್ಮಿಕ ಗುರು ಮುರಾರಿ ಬಾಪು ಪ್ರಥಮ ಬಾರಿ ಶಬರಿ ಆಶ್ರಮಕ್ಕೆ ಭೇಟಿ ನೀಡಿ, ಶಬರಿ ದೇವಸ್ಥಾನ, ಶ್ರೀರಾಮ&ಲಕ್ಷ$್ಮಣ, ಶಿವ ದೇವಾಲಯ, ಬೋರೆ ಹಣ್ಣಿನ ಮರ ಹಾಗೂ ಪುಷ್ಕರಣಿಗಳ ವೀಣೆ ಮಾಡಿ, ಸಮಗ್ರ ಮಾಹಿತಿ ಪಡೆದುಕೊಂಡರು.