ಮಲಕನಕೊಪ್ಪದಲ್ಲಿ ಸಾಕು ನಾಯಿ ಕಚ್ಚಿದ ಚಿರತೆ

19-KLG-1 CHITHA
Published on

ಕಲಘಟಗಿ: ತಾಲೂಕಿನ ಮಲಕನಕೊಪ್ಪ ಗ್ರಾಮದ ಹೊರವಲಯ ಗುಡ್ಡದ ಬಳಿಯ ಜಮೀನಿನಲ್ಲಿರುವ ಮನೆ ಮುಂದೆ ಕಟ್ಟಿದ್ದ ಸಾಕು ನಾಯಿಯನ್ನ ಚಿರತೆಯೊಂದು ಗುರುವಾರ ರಾತ್ರಿ ಕಚ್ಚಿದ ಘಟನೆ ನಡೆದಿದೆ. ಹೀಗಾಗಿ, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ನಾಯಿ ತಿಂದು ಹಾಕಿದ ಸ್ಥಳದ ಸುತ್ತ ಸಿಸಿ ಕ್ಯಾಮರಾ ಅಳವಡಿಸಿದ್ದರು. ಆದರೆ, ಕ್ಯಾಮರಾದಲ್ಲಿ ಚಿರತೆ ಓಡಾಡಿದ ದೃಶ್ಯ ಸೆರೆಯಾಗಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಆಗಮಿಸಿ ಮದ್ದು ಗುಂಡು ಹಾರಿಸಿದ್ದರು.

ಶನಿವಾರ ರಾತ್ರಿ ಮತ್ತೆ ಚಿರತೆ ಹೆಜ್ಜೆಗಳು ಪತ್ತೆಯಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಒಂದು ಬೋನಿನೊಳಗೆ ನಾಯಿ ಕಟ್ಟಿಹಾಕಿ ಅದರ ಸುತ್ತ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ.

ರೈತರು ಮಾತನಾಡಿ, ಬೇಗ ಚಿರತೆ ಹಿಡಿದು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ವಲಯ ಅರಣ್ಯಧಿಕಾರಿ ಅರುಣ ಅಷ್ಟಗಿ ಮಾತನಾಡಿ, ಗ್ರಾಮದ ಹೊರವಲಯದಲ್ಲಿ ಪರಿಶೀಲನೆ ಮಾಡಿದ್ದು, ಚಿರತೆ ಹೆಜ್ಜೆಯ ಕುರುಹು ಪತ್ತೆಯಾಗಿವೆ, ಹೀಗಾಗಿ, ಚಿರತೆ ಸೆರೆಗೆ ಬೋನು ಇಟ್ಟಿದ್ದು, ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಗ್ರಾಮಸ್ಥರು ಜಮೀನಿಗೆ ತೆರಳುವಾಗ ಎಚ್ಚರಿಕೆ ವಹಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net