ಯುವ ಸಮೂಹಕ್ಕೆ ಕೌಶಲ ತರಬೇತಿ ಅಗತ್ಯ

17-KLG LAD LABRARY UDGATANE
Published on

ಕಲಘಟಗಿ: ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಯುವ ಸಮೂಹಕ್ಕೆ ಕೌಶಲ ತರಬೇತಿಯ ಆಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಕರ್ನಾಟಕ ವಿವಿ ಉನ್ನತ ಭಾರತ ಅಭಿಯಾನ ಕೋಶ, ಬೆಂಗಳೂರಿನ ಅವಸರ ಫೌಂಡೇಷನ್ ಟ್ರಸ್ಟ್, ಎಕ್ಸ್‌ಪೆಡಿಟರ್ಸ್ ಹಾಗೂ ಧುಮ್ಮವಾಡ ಗ್ರಾಪಂ, ಧುಮ್ಮವಾಡ, ಜೋಡಳ್ಳಿ, ಗಂಭ್ಯಾಪೂರ ಹಾಗೂ ಕುರುವಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಆಶ್ರಯದಲ್ಲಿ ಧುಮ್ಮವಾಡದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ನಾಲ್ಕು ದತ್ತು ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಅತ್ಯಾಧುನಿಕ ವಿಜ್ಞಾನ ಪ್ರಯೋಗಾಲಯಗಳ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಚತುರ್ವೇದಿ ದಂಪತಿ ನಾಲ್ಕು ಹಳ್ಳಿಗಳಿಗೆ ಒಳಿತಾಗಲಿ ಎಂದು ಅವಸರ ಫೌಂಡೇಷನ್ ವತಿಯಿಂದ ಶ್ರಮಿಸಿದ್ದು, ಅವರಿಗೆ ಹಳ್ಳಿಯ ಜನ ಋಣಿಯಾಗಿರಬೇಕು ಎಂದರು. ಅವಸರ ಫೌಂಡೇಷನ್ ಸಂಸ್ಥಾಪಕ ಆನಂದ ಚತುರ್ವೇದಿ ಮಾತನಾಡಿ, ವಾಹನ ಚಾಲಕ ಉದ್ಯೋಗಕ್ಕೆ ಜರ್ಮನಿಯಲ್ಲಿ ಭಾರಿ ಬೇಡಿಕೆಯಿದೆ. ಇಲ್ಲಿ ತರಬೇತಿ ಪಡೆದ ಅನೇಕ ಚಾಲಕರು ಜರ್ಮನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ಅವಸರ ಫೌಂಡೇಷನ್ ನಿರ್ದೇಶಕಿ ಮಾಳ್ವಿಕಾ ಚತುರ್ವೇದಿ ಮಾತನಾಡಿ, ಆಧುನಿಕ ವಿಜ್ಞಾನ ಪ್ರಯೋಗಾಲಯ ಸ್ಥಾಪನೆಯ ಉದ್ದೇಶ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡಿ ಉನ್ನತ ಹುದ್ದೆಗಳನ್ನು ಹೊಂದಲಿ ಎಂಬುದಾಗಿದೆ ಎಂದರು.
ಕವಿವಿ ಕುಲಪತಿ ಕೆ.ಬಿ. ಗುಡಸಿ ಮಾತನಾಡಿ, ಮಕ್ಕಳ ಸಲುವಾಗಿ ಚತುರ್ವೇದಿ ದಂಪತಿ ಟ್ರಸ್ಟ್ ಮೂಲಕ ಸಹಾಯಧನ ನೀಡಿದ್ದು, ಅದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕವಿವಿ ಕುಲಸಚಿವ ಯಶಪಾಲ್ ಕ್ಷೀರಸಾಗರ , ಜಾಫರ್ ಚೌಧರಿ, ಬಿಇಒ ಉಮಾದೇವಿ ಬಸಾಪುರ, ಡಾ. ಚೇತನ ಜೆ.ಡಿ,. ಪ್ರೊ. ಜೆ.ಎಂ. ಚಂದುನವರ, ಧುಮ್ಮವಾಡ ಗ್ರಾಪಂ ಅಧ್ಯಕ್ಷ ಬಸವರಾಜ ನರೇಂದ್ರ, ತಹಸೀಲ್ದಾರ್ ಗೋಣೆಪ್ಪನವರ, ಡಿ.ವೈ. ಸಾವಂತ, ಹೋಟಿಗುಡ, ಆರ್.ಎಫ್. ಮಾಳಗಿ ಇದ್ದರು. ಪ್ರೊ. ಎನ್. ರಾಮಾಂಜನೇಯಲು, ಕೆ. ಗೀತಾ, ಸಂಗೀತಾ ಮಾನೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net