ಮೈಸೂರು: ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರವು 16ನೇ ನಿರಂತರ ಕಲೆಮನೆ ಉತ್ಸವ ಕಾರ್ಯಕ್ರಮವನ್ನು ಕಲೆಮನೆ ಸಭಾಂಗಣದಲ್ಲಿ ನ.20 ರಂದು ಸಂಜೆ 4.30ಕ್ಕೆ ಆಯೋಜಿಸಿದೆ.\
ಪೌಷ್ಟಿಕ ತಜ್ಞರು ಹಾಗೂ ಕ್ಷೇಮ ಸಲಹೆಗಾರ್ತಿ ನಂದಿನಿ ಮೂರ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಶ್ರೀ ಕೃಷ್ಣ ಕಲಾಲಯದ ಗುರು ವಿದುಷಿ ಸುನಿತಾ ಮೋಹನ್ ಮತ್ತು ಶಿಷ್ಯವರ್ಗ, ಸಿಲಂಬಂ ಅಕಾಡೆಮಿ ಆಫ್ ಆರ್ಟ್ಸ್‌ನ ಗುರು ವಿದುಷಿ ಐಶ್ವರ್ಯಾ ಕಾರ್ತಿಕ್ ಮತ್ತು ಶಿಷ್ಯ ವೃಂದ, ಮೈಸೂರಿನ ಶ್ರೀ ಗಣೇಶ ಸಂಗೀತ ನೃತ್ಯಲಯ ಚಾರಿಟಬಲ್ ಟ್ರಸ್ಟ್‌ನ ಗುರು ವಿದುಷಿ ಆರತಿ ಅರುಣ್ ಶಿಷ್ಯರು, ಗುರು ವಿದ್ವಾನ್ ಆನಂದರಾಜ ಮತ್ತು ಶಿಷ್ಯವೃಂದ, ಕರ್ನಾಟಕ ಕಲಾಶ್ರೀ ಡಾ. ಕೆ.ಕುಮಾರ ಅವರ ಶಿಷ್ಯರು, ವಿದುಷಿ ಮಂಜುಳಾ ಪಾಲ್ ಇಂದ್ರಗಂಟಿ ಮತ್ತು ಶಿಷ್ಯ ವೃಂದ ಕೂಚುಪುಡಿ ನೃತ್ಯ ಪ್ರದರ್ಶನ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.