ಕರೊನಾ ಸೇನಾನಿಗಳಿಗೆ ಊಟದ ವ್ಯವಸ್ಥೆ

KLK-17-1
Published on

ಕಲಕೇರಿ: ಕರೊನಾ ನಿಯಂತ್ರಣಕ್ಕಾಗಿ ಹಗಲಿರುಳು ಹೋರಾಟ ಮಾಡುತ್ತಿರುವ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಸೇರಿ ಇತರೆ ಸೇನಾನಿಗಳಿಗೆ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆ ವತಿಯಿಂದ ಸೋಮವಾರ ಗ್ರಾಮದ ಪೊಲೀಸ್ ಠಾಣೆಯಲಿ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಸಂಸ್ಥೆಯ ಕಾರ್ಯದರ್ಶಿ ಹಾಗೂ ಸಹಕಾರಿ ಸಂಸ್ಥೆ ಮುಖ್ಯಸ್ಥರು ಆಗಿರುವ ಜಹಾಂಗೀರ್ ಸಿರಸಗಿ ಅವರು ಊಟ ಬಡಿಸಿ ಮಾತನಾಡುತ್ತ, ಪ್ರತಿಯೊಬ್ಬ ನಾಗರಿಕರು ಸೋಂಕು ಹರಡದಂತೆ ಮುಂಜಾಗ್ರತೆ ಕ್ರಮ ಅನುಸರಿಸಿ ಕರೊನಾ ಸೇನಾನಿಗಳಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಮುಖಂಡ ನಜೀರ್ ಹೊನ್ನಳ್ಳಿ, ಗ್ರಾಪಂ ಸದಸ್ಯ ನಬಿಲಾಲ ನಾಯ್ಕೋಡಿ, ಮುನ್ನಾ ನಾಯ್ಕೋಡಿ, ಗೂಡುಸಾಬ ಚೌಧರಿ ಮತ್ತು ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net