ಕಾಳೆ ಕೊಲೆ ಪ್ರಕರಣ; ಮತ್ತೆ ನಾಲ್ವರ ಬಂಧನ

Arrest Kaidhi
Published on

ವಿಜಯಪುರ: ಕಳೆದೆರಡು ದಿನಗಳ ಹಿಂದೆ ನಡೆದ ಸುಶೀಲ ತುಳಜಾರಾಮ ಕಾಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ನಾಲ್ವರನ್ನು ಬಂಧಿಸಿದ್ದಾರೆ.

ಜೂ.14 ರಂದು ಸುಶೀಲ ಕಾಳೆಯನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ತ್ವರಿತ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಆಕಾಶ ವಿಠೋಬಾ ಕಲ್ಲವ್ವಗೋಳ ಹಾಗೂ ಸುದೀಪ ಊರ್ಫ್ ಸುಭಾಸ ರಮೇಶ ಬಗಲಿ ಎಂಬಾತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು.

ಬುಧವಾರ ಉಳಿದ ಆರೋಪಿಗಳಾದ ಭರತನಗರದ ನಿವಾಸಿ ಗೌತಮ ಹಣಮಂತ ಆಲಮೇಲ್‌ಕರ (25), ದೇಗಿನಾಳದ ನಾರಾಯಣ ಗಣಪತಿ ಜಾಧವ (20), ಕೊಲ್ಹಾರ ತಾಲೂಕಿನ ಹಣಮಾಪುರದ ಬಸವರಾಜ ಸಿದ್ದಪ್ಪ ಮುನ್ನಾಳ (20) ಹಾಗೂ ಬಾಗಲಕೋಟೆಯ ನವನಗರದ ಬಾಲಕನೋರ್ವನನ್ನು ಬಂಧಿಸಲಾಗಿದೆ.

ಬಂಧಿತರಿಂದ ಕಂಟ್ರಿ ಪಿಸ್ತೂಲ್, 4 ಜೀವಂತ ಗುಂಡು ಹಾಗೂ 3 ಮೋಟಾರ್ ಸೈಕಲ್‌ಗಳನ್ನು ಜಫ್ತು ಮಾಡಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net