ಕಲಬುರ್ಗಿ ಮಠದ ನೂತನ ಶ್ರೀಗೆ ಸನ್ಮಾನ

IMG-20250624-WA0003-1.jpg
Published on

ಹುಬ್ಬಳ್ಳಿ: ಇಲ್ಲಿಯ ಮಂಟೂರ ರಸ್ತೆಯಲ್ಲಿರುವ ಕಲಬುರ್ಗಿ ಮಠದಲ್ಲಿ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳ 53ನೇ ಪುಣ್ಯಸ್ಮರಣೆ ಹಾಗೂ ನೂತನ ಸ್ವಾಮೀಜಿ ಶ್ರೀ ಚರಲಿಂಗ ಸ್ವಾಮಿಗಳ ಪುರ ಪ್ರವೇಶ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಕಲಬುರ್ಗಿ ಮಠ ಬಹಳ ಪುರಾತನವಾಗಿದ್ದು, ಬಹಳ ದಿನಗಳಿಂದ ಸ್ವಾಮೀಜಿಗಳಿಲ್ಲದೆ ಖಾಲಿ ಇತ್ತು. ಇದಕ್ಕೆ ನೂತನ ಶ್ರೀಗಳನ್ನು ನೇಮಕ ಮಾಡಲಾಗಿದೆ. ಇವರ ನೇತೃತ್ವದಲ್ಲಿ ಮಠದ ಅಭಿವೃದ್ಧಿ ಕಾರ್ಯಗಳು, ಮಠದ ವೈಭವ ಮೊದಲಿನಂತೆ ಬೆಳಗಲಿ. ಈಗಿರುವ ಶ್ರೀಗಳು ಮಠದಲ್ಲಿ ಇದ್ದು ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಪೂಜಾ ಕಾರ್ಯಗಳನ್ನು ಮಾಡುತ್ತ ಮಠವನ್ನು ಬೆಳೆಸಬೇಕೆಂದು ಹೇಳಿದರು.

ಇಳಕಲ್ ಚಿತ್ತರಗಿ ಮಠದ ಶ್ರೀಗುರುಮಹಾಂತ ಸ್ವಾಮೀಜಿ, ಕಲಬುರ್ಗಿ ಮಠದ ಪರಂಪರೆ ಹಾಗೂ ನಡೆದು ಬಂದ ದಾರಿಯನ್ನು ವಿಸ್ತಾರವಾಗಿ ತಿಳಿಸಿದರು.

ನೂತನ ಶ್ರೀಗಳನ್ನು ಮಠಕ್ಕೆ ಭಕ್ತಿ ಪೂರ್ವಕವಾಗಿ ಸ್ವಾಗತಿಸಲಾಯಿತು. ಭಕ್ತರು ಗುರುವಂದನೆ ಸಲ್ಲಿಸಿದರು.

ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ರುದ್ರಾಕ್ಷಿ ಮಠದ ಶ್ರೀಬಸವಲಿಂಗ ಸ್ವಾಮೀಜಿ, ಎರಡೆತ್ತಿನ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ, ಬಿಚಗಲ್ಲ ಸ್ವಾಮೀಜಿ ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಸಾವಕಾರ ಅಧ್ಯಕ್ಷತೆ ವಹಿಸಿದ್ದರು.

ಮುಖಂಡರಾದ ಶರಣಪ್ಪ ಕೊಟಗಿ, ರಮೇಶ ಮಹದೇವಪ್ಪನವರ, ಕಲಬುರ್ಗಿಯ ಶಿವಶರಣ ಹೊಸಗೌಡ, ಡಾ. ಶಂಬು ಹೆಗಡಾಳ್, ಶ್ರೀಶೈಲ ಶಿವಮಠ, ಮಹಾಂತೇಶ ಗಿರಿಮಠ, ಅಶೋಕ ಸುಳ್ಳದ, ಎಚ್.ವಿ. ಬಳ್ಳಾರಿ, ಶಂಭು ಲಕ್ಷ್ಮೆಶ್ವರಮಠ, ಮುರುಗೇಶ ಯಕಲಾಸಪುರ, ಕೃಷ್ಣಪ್ಪ ಹಲಗೂರು, ಗುರುಸಿದ್ದಪ್ಪ ಇತರರು ಪಾಲ್ಗೊಂಡಿದ್ದರು.

ಧೋಟಿಹಾಳದ ಶ್ರೀಚಂದ್ರಶೇಖರ ದೇವರು ನಿರ್ವಹಿಸಿದರು. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಸ್ವಾಗತಿಸಿದರು. ಡಾ. ಜ್ಯೋತಿ ಲಕ್ಷ್ಮಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net