ವಿವಿ ಅಭಿವೃದ್ಧಿಗೆ ನ್ಯಾಕ್ ಮಾನ್ಯತೆ ಅವಶ್ಯಕ

KBN VV
Published on

ಕಲಬುರಗಿ: ರಾಜ್ಯದ ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣದಲ್ಲಿ ಸಾಧನೆ ಮತ್ತು ಬೋಧನೆ, ಸಂಶೋಧನೆಗಳಲ್ಲಿ ಉನ್ನತ್ತೀಕರಣ ಹೊಂದಿ ಗುರಿ ಸಾಧಿಸಲು ನ್ಯಾಕ್ ಮೌಲ್ಯಮಾಪನ ಮತ್ತು ಮಾನ್ಯತೆ ಅತಿ ಅವಶ್ಯಕವಾಗಿದೆ ಎಂದು ಕುವೆಂಪು ವಿಶ್ವ ವಿದ್ಯಾಲಯದ ಅನ್ವಯಿಕ ಭೂವಿಜ್ಱಆನ ವಿಭಾಗದ ಪ್ರಾದ್ಯಾಪಕ ಪ್ರೊ.ಆಶ್ಫಕ್ ಅಹ್ಮದ್ ಅಭಿಪ್ರಾಯಪಟ್ಟರು.
ಖಾಜಾ ಬಂದೇನವಾಜ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ನ್ಯಾಕ್ ಮೌಲ್ಯಮಾಪನ ಮತ್ತು ಮಾನ್ಯತೆ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ನ್ಯಾಕ್ ಮಂಡಳಿ ಸಕಾಲದಲ್ಲಿ ರೂಪಿಸುವ ನಿಯಮಗಳಿಂದ ವಿಶ್ವಾವಿದ್ಯಾಲಯ ಮತ್ತು ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಸದಾ ಚಟುವಟಿಕೆಯಿಂದ ಇರುತ್ತಾರೆ ಎಂದರು.
ಕೆಬಿಎನ್ ವಿವಿ ಉಪ ಕುಲಪತಿ ಪ್ರೊ.ಅಲಿ ರಜಾ ಮೂಸ್ವಿ ಮಾತನಾಡಿ, ಎಲ್ಲ ವಿಭಾಗಗಳ ಪ್ರಾಧ್ಯಾಪಕರು ಗುಣಮಟ್ಟದ ಬೋಧನೆ ಮತ್ತು ಸಂಶೋಧನೆಗೆ ಆದ್ಯತೆ ನೀಡಬೇಕಿದೆ. ನ್ಯಾಕ್ ಮಾನ್ಯತೆ ಶ್ರೇಣಿಯಲ್ಲಿ ಉತ್ತಮ ಸ್ಥಾನಗಳಿಸುವುದು ಅವಶ್ಯವಾಗಿದೆ ಎಂದು ಹೇಳಿದರು.
ಡೀನ್‌ಗಳಾದ ಡಾ.ನಿಶಾತ್ ಆರೀಫ್ ಹುಸೇನಿ, ಡಾ.ಸಿದ್ದೇಶ (ವೈದ್ಯಕೀಯ ನಿಕಾಯ), ಪ್ರೊ.ಮೊಹ್ಮದ್ ಅಜಮ್ (ಇಂಜಿನಿಯರಿಂಗ್ ನಿಕಾಯ), ಮನೋವಿಜ್ಱಆನ ವಿಭಾಗದ ಮುಖ್ಯಸ್ಥ ಪ್ರೊ.ರೋಮೆಟï, ಪ್ರೊ.ಎಸ್.ಎ.ಅಹ್ಮದ್ ಇತರರಿದ್ದರು.
ಹಫೀಜ್ ಸಮೀರ್ ಹುಸೇನಿ ಪ್ರಾರ್ಥಿಸಿದರು. ಡಾ. ಮೊಹ್ಮದ್ ಅಬ್ದುಲ್​ ಬಶೀರ್ ಸ್ವಾಗತಿಸಿದರು. ಕೆಬಿಎನ್ ವಿವಿ ಕುಲಸಚಿವೆ ಡಾ. ರುಕ್ಸರ್ ಫಾತಿಮಾ ವಂದಿಸಿದರು. ಡಾ.ಇರ್ಫಾನ್ ಅಲಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net